ಬೆಂಗಳೂರು,ಅ. 14 : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಜೇಬಿನಲ್ಲಿರುವ ಹಣ ವೃದ್ಧನಿಗೆ ಸಹಾಯ ನೀಡಿ ಮಾನವೀತೆಯಿಂದ ಮೆರೆದಿದ್ದಾರೆ. ಶಿವಣ್ಣ ಶೂಟಿಂಗ್ ಮುಗಿಸಿಕೊಂಡು ಮಾನ್ಯತಾ ಟೆಕ್ಪಾರ್ಕ್ ಬಳಿ ಇರುವ ತಮ್ಮ ಮನೆಗೆ ತೆರಳುವಾಗ, ರಸ್ತೆ ಮಧ್ಯೆ ಇಳಿ ವಯಸ್ಸಿನ ವ್ಯಕ್ತಿಯೊಬ್ಬರಿಗೆ ನೆರವಾಗಿರುವ ದೃಶ್ಯವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ವೃದ್ಧನನ್ನು ಕಂಡ ಶಿವರಾಜ್, ದೂರಕ್ಕೆ ಹೋದವರು ಮತ್ತೆ ಕಾರು ಹಿಂದಕ್ಕೆ ತಿರುಗಿಸಿದ್ದಾರೆ. ತಮ್ಮ ಜೇಬಿನಲ್ಲಿದ್ದ ಅಷ್ಟೂ ಹಣವನ್ನು ಆ ವ್ಯಕ್ತಿಗೆ ನೀಡಿದರಲ್ಲದೆ, ಕೂಡಲೇ ಏನಾದರೂ ತೆಗೆದುಕೊಂಡು ತಿನ್ನುವಂತೆ ಹೇಳಿದ್ದಾರೆ. ಕಾರಿನಲ್ಲಿದ್ದ ಶಿವಣ್ಣ ಅವರನ್ನು ಕಂಡು ಸ್ವತಃ ಆ ಅಜ್ಜ ಖುಷಿಯಾಗಿದ್ದಾರೆ.