ಬೆಂಗಳೂರು, ಡಿ. 23: ಸಾಮಾನ್ಯವಾಗಿ ಎಲ್ಲರ ತರ ನಾನು ಕೂಡ ಬೆಳ್ಳಗಾಗಿರಬೇಕು ಎನ್ನುವುದು ಎಲ್ಲರ ಆಸೆ. ಇದಕ್ಕೆ ಬ್ಯೂಟಿಪಾರ್ಲರ್ ಗೆ ಹೋಗಿ ಗಂಟೆಗಟ್ಟಲೆ ಕುಳಿತು ಹಣ ಕೊಟ್ಟು ಬರ್ತಾರೆ. ಆದರೆ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕಾಂತಿಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು.
ಕಡಲೆ-ಅರಿಶಿನ: ಕಡಲೆ ಹಿಟ್ಟು-ಅರಿಶಿನ ಹಾಗೂ ಶ್ರೀಗಂಧದ ಪುಡಿಯನ್ನು ಸೇರಿಸಿ, ಅದಕ್ಕೆ ಸ್ವಲ್ಪ ರೋಜ್ ವಾಟರ್ ಮಿಶ್ರಣ ಮಾಡಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮಿಶ್ರಣ ಅರ್ಧ ಒಣಗಿದ ಮೇಲೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಎಳ್ಳಿನ ಪ್ಯಾಕ್: ಎಳ್ಳನ್ನು ಹಾಲು ಅಥವಾ ನೀರಿನಲ್ಲಿ ರಾತ್ರಿ ಪೂರ್ತಿ ನೆನೆಸಿಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಅದನ್ನು ಮಿಕ್ಸಿ ಮಾಡಿಕೊಂಡು ಪೂರ್ತಿ ದೇಹಕ್ಕೆ ಹಚ್ಚಿಕೊಳ್ಳಿ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುವುದಲ್ಲದೆ ಚಳಿಗಾಲದಲ್ಲಿ ಚರ್ಮಕ್ಕೆ ರಕ್ಷಣೆ ನೀಡುತ್ತದೆ.
ಹಾಲು ಕಡಲೆ ಹಿಟ್ಟು: ಬಿಸಿ ಮಾಡದ ಹಾಲು ಹಾಗೂ ಕಡಲೆ ಹಿಟ್ಟಿನ ಮಿಶ್ರಣವನ್ನು ಸಿದ್ಧಪಡಿಸಿಕೊಂಡು ಇಡೀ ದೇಹಕ್ಕೆ ಹಚ್ಚಿಕೊಳ್ಳಿ. ಇದು ಚರ್ಮ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ.
ಬೇವು ತುಳಸಿ: ಬೇವಿನ ಎಲೆ ಹಾಗೂ ತುಳಸಿ ಎಲೆಯನ್ನು ರುಬ್ಬಿ ಮಿಶ್ರಣ ತಯಾರಿಸಿಕೊಳ್ಳಿ. ಅದನ್ನು ದೇಹಕ್ಕೆ ಹಚ್ಚಿಕೊಳ್ಳಿ. ಇದರಲ್ಲಿ ಸಾಕಷ್ಟು ಔಷಧಿ ಗುಣವಿದ್ದು, ಎಂಟಿಬಯೋಟಿಕ್ ರೂಪದಲ್ಲಿ ಕೆಲಸ ಮಾಡುತ್ತದೆ. ಜೊತೆಗೆ ಚರ್ಮವನ್ನು ಸೋಂಕಿನಿಂದ ರಕ್ಷಿಸುತ್ತದೆ.