ಕಂಕುಳದ ಕಪ್ಪು ಕಲೆಗಳಿಗೆ ಮನೆ ಮದ್ದು

ಕಂಕುಳದ ಕಪ್ಪು ಕಲೆಗಳಿಗೆ ಮನೆ ಮದ್ದು

ಬೆಂಗಳೂರು, ಜ. 14: ಸೌಂದರ್ಯ ಪ್ರಿಯ ಮಹಿಳೆಯರಿಗೆ ಕಂಕುಳದಲ್ಲಿ ಕಪ್ಪು ಕಲೆಗಳು ಯಾವಾಗಲೂ ದೊಡ್ಡ ಸಮಸ್ಯೆಯಾಗಿರುತ್ತದೆ. ಕೈ-ಕಾಲು, ಬೆರಳುಗಳ ಕಪ್ಪಾಗುವುದು ತಡೆಯುವ ಕುರಿತು ಮಹಿಳೆಯರು ಚಿಂತಿಸುತ್ತಾರೆ. ಸಾಮಾನ್ಯವಾಗಿ ಹುಡುಗರಿಗಿಂತ ಹುಡುಗಿಯರು ತ್ವಚೆಯ ಬಗ್ಗೆ ಜಾಸ್ತಿ ಕಾಳಜಿ ವಹಿಸುತ್ತಾರೆ. ಅದರಲ್ಲಿ ಕಂಕುಳದ ಸಮಸ್ಯೆ ಹುಡುಗಿಯರಲ್ಲಿ ಜಾಸ್ತಿ ಕಾಡುತ್ತದೆ. ಈ ರೀತಿ ಇದ್ದಾಗ ಸ್ಲೀವ್ ಲೆಸ್ ಡ್ರೆಸ್ ಗಳನ್ನೂ ಧರಿಸಲು ಮುಜುಗರ ಪಡುತ್ತಾರೆ. ಇದರಿಂದ ಅವರು ತಮ್ಮಗಿಷ್ಟ ಬಂದ ಬಟ್ಟೆಗಳನ್ನು ಧರಿಸಲು ಆಗುವುದಿಲ್ಲ. ಇದನ್ನು ಮನೆಮದ್ದಿನಿಂದ ನಿವಾರಿಸಬಹುದು.

ಇನ್ನು ಕೆಲವರ ದೇಹದ ಹಲವು ಭಾಗಗಳಲ್ಲಿ ಚರ್ಮ ಕಪ್ಪಾಗಿರುತ್ತದೆ. ಅಲ್ಲದೇ ಸಾಮಾನ್ಯವಾಗಿ ಕಪ್ಪು ಕಲೆ ಇರುವಂತಹ ಭಾಗದಲ್ಲಿ ಕೂದಲುಗಳನ್ನು ತೆಗೆಯಲು ಹೇರ್ ಕ್ರಿಮ್ ಬಳಕೆ ಮಾಡುತ್ತಾರೆ. ಈ ಕಪ್ಪು ಕಲೆ ಹೋಗಲಾಡಿಸಲು ಕೆಲವು ಮನೆಮದ್ದುಗಳನ್ನು ಬಳಸಿ.

ಆಲುಗಡ್ಡೆಯನ್ನು ತೆಗೆದುಕೊಂಡು ದೇಹದ ಯಾಯ್ಯಾವ ಭಾಗಗಳಲ್ಲಿ ಕಪ್ಪು ಕಲೆ ಇದೆಯೋ (ಕಂಕುಳಲ್ಲಿ ಕಪ್ಪು ಕಲೆ) ಆ ಭಾಗಗಳಲ್ಲಿ ಆಲುಗಡ್ಡೆಯ ಕಟ್ ಮಾಡಿರುವ ಸ್ಲೈಸ್ ಗಳನ್ನು ಕಪ್ಪು ಕಲೆ ಇರುವ ಕಡೆಗಳಲ್ಲಿ ಸುಮಾರು 20-25 ನಿಮಿಷಗಳವರೆಗೆ ಇಟ್ಟುಕೊಳ್ಳಬೇಕು. ಅಲ್ಲದೇ ಆಲೂಗಡ್ಡೆ ಜ್ಯೂಸ್ ಮಾಡಿ ಉಜ್ಜಬೇಕು. 30 ನಿಮಿಷದ ಬಳಿಕ ನೀರಿನಿಂದ ತೊಳೆದುಕೊಳ್ಳಬೇಕು.

ಹಾಗೆಯೇ ವಿಟಮಿನ್ ಸಿ ಇರುವ ಪಪ್ಪಾಯಿ, ಸೀಬೆ, ಕೋಸುಗಡ್ಡೆ, ಕಿವಿ ಮತ್ತು ಟೊಮೋಟೋಗಳನ್ನು ಹೆಚ್ಚಾಗಿ ಸೇವನೆ ಮಾಡಿದರೆ ದೇಹದಲ್ಲಿನ ಕಪ್ಪು ಕಲೆಗಳು ಮಾಯವಾಗುತ್ತವೆ.

ಫ್ರೆಶ್ ನ್ಯೂಸ್

Latest Posts

Featured Videos