ಗುಜರಾತ್, ಮೇ. 23, ನ್ಯೂಸ್ ಎಕ್ಸ್ ಪ್ರೆಸ್: ಮತ್ತೆ ಎನ್ ಡಿಎ ಸರ್ಕಾರ ಬರೋದು ಪಕ್ಕಾ ಆಗ್ತಿದಂತೆ ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾ ಬೆನ್ ಮಗನ ಕೈ ಹಿಡಿದ ದೇಶದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ರು. ಮನೆಯಿಂದ ನಗುಮೊಗದೊಂದಿಗೆ ಹೊರಕ್ಕೆ ಬಂದ ಮೋದಿ ಅವರ ತಾಯಿ ಹೀರಾ ಬೆನ್, ಕೈ ಮುಗಿದು ದೇಶದ ಜನತೆಗೆ ಧನ್ಯವಾದ ಸಲ್ಲಿಸಿದರು.
ವಾರಣಾಸಿಯಲ್ಲಿ ನಮೋ ಜಯಭೇರಿ..!
ಉತ್ತರ ಪ್ರದೇಶದ ಪ್ರಸಿದ್ಧ ಪುಣ್ಯಕ್ಷೇತ್ರ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಜಯ ದಾಖಲಿಸಿದ್ದಾರೆ. ಕಾಂಗ್ರೆಸ್‍ನ ಅಜಯ್‍ರಾಯ್ ಅವರನ್ನು 1.25ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮೋದಿ ಪರಾಭವಗೊಳಿಸಿದ್ದಾರೆ. ಈ ಗೆಲುವಿನೊಂದಿಗೆ ಮೋದಿ ಎರಡನೇ ಸಲ ವಾರಣಾಸಿಯಿಂದ ಚುನಾಯಿತರಾಗಿದ್ದು, ಪ್ರಧಾನಿಯಾಗಿ ದ್ವಿತೀಯ ಬಾರಿಗೆ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ನಿರೀಕ್ಷೆಯಂತೆ ಮೋದಿ ವಾರಣಾಸಿಯಲ್ಲಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.