ದೋಹಾ, ಸೆ. 30 : ಅಥ್ಲೆಟಿಕ್ಸ್ನ ವಿಶ್ವ ಚಾಂಪಿಯನ್ಷಿಪ್ಸ್ನಲ್ಲಿ ಅತಿ ಹೆಚ್ಚು ಚಿನ್ನ ಗೆದ್ದ ದಾಖಲೆಯನ್ನು ಅಮೆರಿಕದ ಓಟಗಾರ್ತಿ ಅಲಿಸನ್ ಫೆಲಿಕ್ಸ್ ತಮ್ಮದಾಗಿಸಿಕೊಂಡಿದ್ದು, ವಿಶ್ವ ಶ್ರೇಷ್ಠ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಮುರಿದಿದ್ದಾರೆ. ಭಾನುವಾರ ತಡರಾತ್ರಿ ನಡೆದ ಮಿಶ್ರ ವಿಭಾಗದ 4×400 ರಿಲೇ ಓಟದಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಅಲಿಸನ್ ಈ ವಿಶ್ವ ದಾಖಲೆ ತಮ್ಮದಾಗಿಸಿಕೊಂಡರು. ಪ್ರಸಕ್ತ ಚಾಂಪಿಯನ್ಷಿಪ್ಸ್ ಮೂತಕ ತಾವು ಒಟ್ಟು ಗೆದ್ದ ಚಿನ್ನದ ಪದಕಗಳನ್ನು ಫೆಲಿಕ್ಸ್ 12ಕ್ಕೆ ವಿಸ್ತರಿಸಿಕೊಂಡಿದ್ದಾರೆ. ಈ ಮೂಲಕ 2017ರ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ಷಿಪ್ಸ್ನಲ್ಲಿ ಬೋಲ್ಟ್ ಗಳಿಸಿದ್ದ ಒಟ್ಟು ಪದಕಗಳ (11) ದಾಖಲೆ ಹಿಂದೆ ಸರಿಸಿದ್ದಾರೆ.