ಹೆಚ್ಚು ಮತ ಗಳಿಸಿ ದಾಖಲೆ ಬರೆದ ಬಿಜೆಪಿ ಪಕ್ಷದ ಸಂಸದ.!

ಹೆಚ್ಚು ಮತ ಗಳಿಸಿ ದಾಖಲೆ ಬರೆದ ಬಿಜೆಪಿ ಪಕ್ಷದ ಸಂಸದ.!

ಗುಜರಾತ್, ಮೇ. 25, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಗಿಂತ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಗಿಂತ ಹೆಚ್ಚು ಮತ ಗಳಿಸಿ ಬಿಜೆಪಿ ಪಕ್ಷದ ಗುಜರಾತ್ ಸಂಸದ ಈ ಬಾರಿ ದಾಖಲೆ ಬರೆದಿದ್ದಾರೆ.

ಗುಜರಾತ್ ನವ್ಸ್ ರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಆರ್. ಪಾಟೀಲ್ ಕಾಂಗ್ರೆಸ್‌ ಎದುರಾಳಿ ವಿರುದ್ದ 6.89 ಲಕ್ಷ ಅಧಿಕ ಮತಗಳ ಲೀಡ್ ನಿಂದ ಗೆದ್ದಿದ್ದಾರೆ.

2014ರಲ್ಲಿ ತಂದೆಯ ಮರಣದ ಬಳಿಕ ಚುನಾವಣೆಗೆ ಸ್ಪರ್ಧಿಸಿದ ಬಿಜೆಪಿ ಪಕ್ಷದ ಸಂಸದೆ ಪಂಕಜಾ ಮುಂಡೆ 6.96 ಅತ್ಯಧಿಕ ಮತಗಳನ್ನು ಗಳಿಸಿ ದಾಖಲೆ ಬರೆದಿದ್ರು. ಮೋದಿ ಮತ್ತು ಅಮಿತ್ ಷಾ ಅವರಿಗೂ ಆಶ್ಚರ್ಯ ಹುಟ್ಟುವ ರೀತಿಯಲ್ಲಿ ಪಾಟೀಲ್ ಈ ಬಾರಿ ಅಧಿಕ ಮತ ಗಳಿಸಿದ್ದಾರೆ.

ವಾರಣಾಸಿಯಲ್ಲಿ ಪ್ರಧಾನಿ ಮೋದಿ 4.80 ಲಕ್ಷ ಮತಗಳ ಅಂತರದಿಂದ ಪುನರಾಯ್ಕೆಯಾಗಿದ್ದಾರೆ. ಇನ್ನು ವಿ.ಕೆ. ಸಿಂಗ್ ಕೂಡ 5 ಲಕ್ಷ ಮತಗಳ ಅಂತರದಲ್ಲಿ ಜಯ ದಾಖಲಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos