ಬೆಂಗಳೂರು, ಮೇ. 30, ನ್ಯೂಸ್ ಎಕ್ಸ್ ಪ್ರೆಸ್: ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆಯೆಂದರೆ ಚರ್ಮದ ಅಲರ್ಜಿಗಳು. ಇದರ ಗುಣ ಲಕ್ಷಣಗಳೆಂದರೆ ಚರ್ಮದ ಉರಿಯೂತ, ನವೆ, ತುರಿಕೆಯಿಂದ ಕೂಡಿರುವ ಕೆಂಪು ಚರ್ಮ. ಈ ರೀತಿಯ ಅಲರ್ಜಿಗಳು ದೇಹದ ಯಾವುದೇ ಭಾಗದಲ್ಲೂ ಕಾಣಿಸಿಕೊಳ್ಳಬಹುದು.
ರೋಸ್ ವಾಟರ್ : ತ್ವಚೆಯ ಸಮಸ್ಯೆಗಳಿಗೆ ಇದು ಉತ್ತಮವಾದ ಪರಿಹಾರವಾಗಿದ್ದು, ಅಲರ್ಜಿಯಾಗಿರುವ ಜಾಗದಲ್ಲಿ ಪ್ರತಿ ದಿನ ರೋಸ್ ವಾಟರ್ ಅನ್ನು ಲೇಪಿಸಿ. 15-20 ನಿಮಿಷದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.
ಐಸ್ ಕ್ಯೂಬ್ಸ್ : ಚರ್ಮವನ್ನು ಬಿಗಿತಗೊಳಿಸುವಲ್ಲಿ ಇದು ಅದ್ಭುತವಾದ ಕೆಲಸವನ್ನು ಮಾಡುತ್ತದೆ. ಸ್ಕಿನ್ ಅಲರ್ಜಿಯಿಂದ ಕಿರಿಕಿರಿಯಾಗುತ್ತಿದ್ದರೆ, 1 ತೆಳುವಾದ ಬಟ್ಟೆಯಲ್ಲಿ ಕೆಲವು ಐಸ್ ಕ್ಯೂಬ್ ಗಳನ್ನು ಹಾಕಿಕೊಳ್ಳಿ. ನಂತರ ನಿಧಾನವಾಗಿ ಮಸಾಜ್ ಮಾಡಿದರೆ, ಉತ್ತಮ ಪರಿಹಾರವನ್ನು ಕಂಡುಕೊಳ್ಳಬಹುದು.
ಮಜ್ಜಿಗೆ : ಚರ್ಮದ ಮೇಲಿನ ಸೋಂಕುಗಳಿಗೆ ಇದು ಬೆಸ್ಟ್ ಚಿಕಿತ್ಸೆಯಾಗಿದೆ. ಶುದ್ಧವಾದ ಮಜ್ಜಿಗೆಯಿಂದ ಮುಖವನ್ನು ತೊಳೆದುಕೊಂಡು, 10-15 ನಿಮಿಷಗಳವರೆಗೆ ಅದನ್ನು ಹಾಗೆಯೇ ಒಣಗಲು ಬಿಡಿ. ನಂತರ ನೀರಿನಿಂದ ತೊಳೆದುಕೊಳ್ಳಿ.