ಹುಳಿಯಾರು: ಬ್ಲಾಕ್ ಕಾಂಗ್ರೆಸ್ ವತಿಯಿಂದ ಹುಳಿಯಾರು ಪಟ್ಟಣ ಪಂಚಾಯ್ತಿ ಯ ೧೨ನೇ ವಾರ್ಡ್ ನ ಮಾರುತಿನಗರ ದಲ್ಲಿ ಆರೋಗ್ಯ ಹಸ್ತ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಇಲ್ಲಿನ ನಿವಾಸಿಗಳಿಗೆ ಆರೋಗ್ಯ ಹಸ್ತ ಅಭಿಯಾನದ ಸದಸ್ಯರುಗಳಾದ ತಿಪ್ಪೇಶ್, ಲವ, ಕುಶ ಅವರುಗಳು ಟೆಂಪರೇಚರ್ ತಪಾಸಣೆ ಮತ್ತು ಪಲ್ಸ್ ತಪಾಸಣೆ ನಡೆಸಿ ಸಾರ್ವಜನಿಕರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಿದ್ದರು.
ಜಿ.ಪಂ ಸದಸ್ಶ ವೈ.ಸಿ.ಸಿದ್ದರಾಮಯ್ಶ ಪಪಂ ಮಾಜಿ ಸದಸ್ಶರುಗಳಾದ ಧನುಷ್ ರಂಗನಾಥ್, ಎಸ್ ಆರ್ ಎಸ್ ದಯಾನಂದ್, ಬಡಗಿ ರಾಮಣ್ಣ, ಪ್ರೂಟ್ ಸಿದ್ದೀಕ್, ರಹಮತ್, ಕೊರಿಯರ್ ಹರೀಶ್, ಪಂಕಜ್, ಕೊರೊನಾ ವಾರಿಯರ್ ಗಳಾದ ಉಪಸ್ಥಿತರಿದ್ದರು.