ಹತ್ಯೆ ಪ್ರಕರಣವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷದಿಂದ ಪ್ರತಿಭಟನೆ

ಹತ್ಯೆ ಪ್ರಕರಣವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷದಿಂದ ಪ್ರತಿಭಟನೆ

ಚಿಂತಾಮಣಿ, ಜು. 8 : ಮಾನವೀಯತೆಯನ್ನು ಉಳಿಸಬೇಕು ಮತ್ತು ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಲಿತರು  ತಹಶೀಲ್ದಾರ್  ಅವರಿಗೆ ಮನವಿ ಸಲ್ಲಿಸಿದರು.

ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಆಗುತ್ತಿರುವ ಅನ್ಯಾಯ ಅಕ್ರಮಗಳಿಗೆ ಕಡಿವಾಣ ಹಾಕಲು ಹೊಸ ಕಾನೂನು ಜಾರಿ ಮಾಡಬೇಕು. ಉತ್ತರ ಪ್ರದೇಶದ ಉನ್ನಾವ್, ರಾಜ್ಯದ ಪುತ್ತೂರು ಮತ್ತು ತೆಲಂಗಾಣದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆದಿದೆ. ಉತ್ತರಪ್ರದೇಶದಲ್ಲಿ, ಗುಂಡ್ಲುಪೇಟೆಯಲ್ಲಿ, ಜಾರ್ಖಂಡ್, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಗುಂಪು ಹಲ್ಲೆ, ಕೊಲೆ ಮುಂತಾದ ಅಮಾನವೀಯ ಘಟನೆಗಳು ಜರುಗಿವೆ. ಧರ್ಮ, ದೇಶಪ್ರೇಮದ ಹೆಸರಿನಲ್ಲಿ ಹಲ್ಲೆ, ದೌರ್ಜನ್ಯ ನಡೆದಿದೆ.

ದೇಶದ ಪವಿತ್ರ ಸ್ಥಳ ಸಂಸತ್ ಭವನದಲ್ಲಿ ವಿವಿಧ ಸಂಸದರು ಧರ್ಮದ ಘೋಷಣೆಗಳನ್ನು ಮಾಡುವ ಮೂಲಕ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ. ಇವುಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿ

ಸಿದರು.

ಎಲ್ಲಾ ರಾಜ್ಯದ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರು ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕು ಎಂದು ಕೋರಿದ್ದಾರೆ.

ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕರಾದ ಕವಾಲಿ ವೆಂಕಟರವಣಪ್ಪ.  ಲಕ್ಷ್ಮೀನಾರಾಯಣ್. ದೇವಮ್ಮ. ರಾಮಕೃಷ್ಣಪ್ಪ, ಚಲಪತಿ, ವರಲಕ್ಷ್ಮಿ, ಜನ ನಾಗಪ್ಪ,ಕದಿರಪ್ಪ, ವೆಂಕಟೇಶ್, ನಾರಾಯಣ ಸ್ವಾಮಿ, ಸೇರಿದಂತೆ ಹಲವಾರು ದಲಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos