ಮಾ.4, ನ್ಯೂಸ್ ಎಕ್ಸ್ ಪ್ರೆಸ್ : ಡಿ ಬಾಸ್ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೊಸ ಕಲಾವಿದರ ಚಿತ್ರಗಳನ್ನ ಬೆಂಬಲಿಸುತ್ತಿದ್ದಾರೆ. ಬರಿ ಚಿತ್ರರಂಗದಲ್ಲಿ ಮಾತ್ರವಲ್ಲದೇ ಯುವಕರಿಗೆ ಸ್ಫೂರ್ತಿಯಾಗುವಂತಹ ಕೆಲಸಗಳಲ್ಲಿ ಕೂಡ ತೊಡಗಿಕೊಳ್ಳು್ತ್ತಿದ್ದಾರೆ ಹುಟ್ಟುಹಬ್ಬದ ದಿನ ದವಸ ಧಾನ್ಯಗಳನ್ನ ಸಂಗ್ರಹಿಸಿ ಅನಾಥಾಶ್ರಮಗಳಿಗೆ ಹಂಚಿದರು. ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್, ಗಿಡಗಳನ್ನು ನೆಡಿ, ಅರಣ್ಯ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ಹೀಗೆ, ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನ ಕೊಡುತ್ತಿರುವಡಿ ಬಾಸ್, ಹಂಪಿ ಉತ್ಸವದಲ್ಲಿ ಲವರ್ಸ್ ಗೆ ಒಂದು ವಿಶೇಷವಾದ ಕಿವಿ ಮಾತನ್ನ ಹೇಳಿದ್ದಾರೆ.
ಇದು ಜನರಲ್ ಆಗಿ ಹೇಳಿದರು ಕೂಡಾ, ಅದರ ಹಿಂದೆ ಬಲವಾದ ಕಾರಣವೂ ಇತ್ತು. ಅಷ್ಟಕ್ಕೂ, ದರ್ಶನ್ ಹೇಳಿದ ಬುದ್ದಿವಾದ ಏನು? ಪ್ರೇಮಿಗಳಿಗೆ ದಾಸ ಕೊಟ್ಟ ಸಲಹೆ ಏನು?.
”ಹಂಪಿ ಉತ್ಸವ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದೆ. ಇಲ್ಲಿರುವ ಕಟ್ಟಡಗಳು, ಕೃಷ್ಣದೇವರಾಯ ಬೆಳಸಿದ ಸಂಸ್ಕೃತಿಯನ್ನ ನಾವು ಕಾಪಾಡಬೇಕಿದೆ. ಇನ್ನು ನೂರು ಶತಮಾನ ಕಳೆದರೂ ಈ ರೀತಿ ಕಲ್ಲಿನಲ್ಲಿ ಕಟ್ಟಡಗಳನ್ನ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿರುವ ಎಲ್ಲವನ್ನ ಉಳಿಸಿಕೊಳ್ಳಬೇಕು” ಎಂದು ನಟ ದರ್ಶನ್ ವಿನಂತಿಸಿದ್ದಾರೆ.
”ಮುಂದಿನ ಪೀಳಿಗೆಯವರು ಇದನ್ನೆಲ್ಲಾ ನೋಡಬೇಕು. ನಾವು ನೋಡಿದ್ದೀವಿ ನಮ್ಮ ಮಕ್ಕಳು ಇದನ್ನ ನೋಡಬೇಕು. ಅದರ ಮೇಲೆ ಕೆತ್ತನೆ ಮಾಡುವುದು, ಅದರ ಮೇಲೆ ಹೆಸರುಗಳನ್ನ ಹಾಕುವುದು ಬೇಡ. ವಿಶೇಷವಾಗಿ ಲವರ್ಸ್ ಗಳು ಅದನ್ನೆಲ್ಲಾ ಮಾಡುತಾರೆ ಅದೆಲ್ಲ ಬೇಡ” ಎಂದು ಡಿ ಬಾಸ್ ಮನವಿ ಮಾಡಿಕೊಂಡರು.