ಹಳೆಯ ನೆನೆಪು ನೆನಪಿಸಿಕೊಂಡ : ಸಚಿನ್

ಹಳೆಯ ನೆನೆಪು ನೆನಪಿಸಿಕೊಂಡ : ಸಚಿನ್

ಮುಂಬಯಿ, ಅ. 26 : ‘’ನಾನು ವಿದ್ಯಾರ್ಥಿಯಾಗಿದ್ದಾಗ ಭಾರತಕ್ಕಾಗಿ ಆಡುವ ಕನಸನ್ನು ಹೊತ್ತುಕೊಂಡಿದ್ದೆ. 11ನೇ ವಯಸ್ಸಿನಲ್ಲಿ ಕ್ರಿಕೆಟ್ ಪ್ರಯಾಣ ಆರಂಭವಾಯಿತು. ನನಗೀಗಲೂ ನೆನಪಿದೆ, ಮೊದಲ ಬಾರಿಗೆ ಆಯ್ಕೆಗೆ ಹೋದಾಗ ನನ್ನನ್ನು ಆಯ್ಕೆದಾರರು ತಿರಸ್ಕರಿಸಿದ್ದರು ಎಂದು ಸಚಿನ್ ತೆಂಡೂಲ್ಕರ್ ಹಳೆಯ ನೆನಪುಗಳನ್ನು ನೆನಪಿಸಿಕೊಂಡರು.
ಭಾರತೀಯ ಕ್ರಿಕೆಟ್ ದಂತ ಕತೆ ಸಚಿನ್ ಕ್ರಿಕೆಟ್ ವೃತ್ತಿ ಜೀವನದ ಮೊದಲ ಆಯ್ಕೆ ಪ್ರಕ್ರಿಯೆಯಲ್ಲೇ ತಾವು ತಿರಸ್ಕೃತಗೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
11ನೇ ವರ್ಷದಲ್ಲೇ ನನ್ನ ಕ್ರಿಕೆಟ್ ಪ್ರಯಾಣ ಆರಂಭವಾಗಿತ್ತು. ಮೊದಲ ಬಾರಿ ಆಯ್ಕೆ ಪರೀಕ್ಷೆಗೆ ಹೋಗಿದ್ದಾಗ ಆಯ್ಕೆಗಾರರು ನನ್ನನ್ನು ತಿರಸ್ಕರಿದ್ದರು. ಇನ್ನಷ್ಟು ಶ್ರಮ ಹಾಕುವಂತೆ ಹೇಳಿ ವಾಪಸ್ ಕಳಿಸಿದ್ದರು, ಎಂದು ಸ್ಮರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos