ಕೂದಲಿನ ಆರೋಗ್ಯಕ್ಕೆ ದಾಸವಾಳ

ಕೂದಲಿನ ಆರೋಗ್ಯಕ್ಕೆ ದಾಸವಾಳ

ಜ. 27 : ದಾಸವಾಳ ಹೂವು, ನೋಡುಗರ ಕಣ್ಮನಗಳನ್ನು ತನ್ನ ಸೌಂದರ್ಯದಿಂದಲೇ ತನ್ನತ್ತ ಸೆಳೆಯುವ ಒಂದು ಸುಂದರವಾದ ಹೂವು. ಇತರ ಹೂವುಗಳಿಗಿಂತ ಸ್ವಲ್ಪ ಅಗಲವಾಗಿ ಮೂಡಿ ಬಂದು ಒಂದೆಳೆಯಲ್ಲಿ ಅರಳುವ ಈ ಹೂವು ಝೇಂಕಾರದಿಂದ ಓಡಾಡುವ ದುಂಬಿಗಳನ್ನು ಕೂಡ ತನ್ನತ್ತ ಆಕರ್ಷಣೆ ಮಾಡುತ್ತದೆ. ಮನುಷ್ಯನ ತಲೆ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಸುಲಭ ರೀತಿಯಲ್ಲಿ ಪರಿಹಾರ ಮಾಡುವ ಅದ್ಭುತ ಗುಣ ಲಕ್ಷಣ ದಾಸವಾಳ ಹೂವಿಗೆ ಇದೆ. ಪ್ರಾಚೀನ ಕಾಲದಿಂದಲೂ ಆಯುರ್ವೇದ ಪದ್ಧತಿಯಲ್ಲಿ ಇದು ಸಾಬೀತಾಗಿದೆ.

ಮನುಷ್ಯನ ತಲೆ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳೆಂದರೆ ತಲೆ ಹೊಟ್ಟು, ಬಿಳಿ ಕೂದಲು, ಕೂದಲು ಉದುರುವಿಕೆ ಮತ್ತು ನೆತ್ತಿಯ ಸೋಂಕು. ಇದರ ಜೊತೆಗೆ ಬೊಕ್ಕು ತಲೆಯ ಸಮಸ್ಯೆ ಹೊಂದಿರುವವರು ಹಲವರಿದ್ದಾರೆ. ಮಾರುಕಟ್ಟೆಯಲ್ಲಿ ಅನೇಕ ಕೂದಲು ಆರೈಕೆ ಉತ್ಪನ್ನಗಳು ಕೂದಲಿನ ಆರೋಗ್ಯಕ್ಕೆ ಸಹಕಾರಿಯಾಗಿ ಈಗಾಗಲೇ ತಲೆಯೆತ್ತಿವೆ.

ಫ್ರೆಶ್ ನ್ಯೂಸ್

Latest Posts

Featured Videos