ಗ್ವಾಲಿಯರ್ ನಲ್ಲಿ ದುರಂತ: ಸ್ಥಳದಲ್ಲೆ 7 ಜನ ಸಾವು

ಗ್ವಾಲಿಯರ್ ನಲ್ಲಿ ದುರಂತ:  ಸ್ಥಳದಲ್ಲೆ 7 ಜನ ಸಾವು

ಗ್ವಾಲಿಯರ್‌, ಮೇ. 11, ನ್ಯೂಸ್ ಎಕ್ಸ್ ಪ್ರೆಸ್: ಕಾರು ಮತ್ತು ಟ್ರಕ್‌ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಭೀಕರ ದುರಂತ ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ಘಟನೆ ನಡೆಸಿದೆ.

ಕಾರು ಮತ್ತು ಟ್ರಕ್‌ ನಡುವೆ ಮುಖಾಮುಖಿ ಢಿಕ್ಕಿಯಿಂದ ಮೂವರು ಮಕ್ಕಳು , ಇಬ್ಬರು ಮಹಿಳೆಯರು ಸೇರಿ ಒಟ್ಟು 7 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ. ಭೀಕರ ಅವಘಡ ಶನಿವಾರ ಬೆಳಗ್ಗೆ ಸಂಭವಿಸಿದೆ. ಕಾರು ನಿಯಂತ್ರಣ ತಪ್ಪಿ ಸರಕು ಸಾಗಾಣಿಕೆ ಮಾಡುತ್ತಿದ್ದ ವೇಳೆ ಟ್ರಕ್‌ಗೆ ಢಿಕ್ಕಿಯಾಗಿ ದುರಂತ ಸಂಭವಿಸಿದೆ. ಕಾರಿನಲ್ಲಿ 9 ಜನ ಪೈಕಿ  7 ಜನ  ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.  ಇಬ್ಬರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos