ಗೂಂಡಾಗಳಿಗೆ ಉಳಿಗಾಲವಿಲ್ಲ

ಗೂಂಡಾಗಳಿಗೆ ಉಳಿಗಾಲವಿಲ್ಲ

ಹುಬ್ಬಳ್ಳಿ, ಸೆ.7 : ದೇಶದಲ್ಲಿ ಭ್ರಷ್ಟಾಚಾರ, ಗುಂಡಾಗಳು ಹಾಗೂ ಕೊಲೆಗಡುಕರಿಗೆ ರಕ್ಷಣೆ ಸಿಗುತ್ತೆ ಎಂಬ ನಂಬಿಕೆ ಇತ್ತು. ಇದೀಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಿಗಿಯಾದ ಆಡಳಿತದಿಂದ ಅವರಿಗೆ ಉಳಿಗಾಲವಿಲ್ಲವೆಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಯೋಗೀಶ್ ಗೌಡ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ. ತಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪ್ರಕರಣವನ್ನು ಸಿಬಿಐಗೆ ನೀಡಲಾಗಿದೆ. ಗುಂಡಾಗಳ ಬೆನ್ನಿಗೆ ನಮ್ಮ ಸರ್ಕಾರ ನಿಲ್ಲುವುದಿಲ್ಲ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos