ದಸರಾ ಹಬ್ಬಕ್ಕೆ BBMP ಗೈಡ್ ಲೈನ್ ಬಿಡುಗಡೆ  

ದಸರಾ ಹಬ್ಬಕ್ಕೆ BBMP ಗೈಡ್ ಲೈನ್ ಬಿಡುಗಡೆ  

ಬೆಂಗಳೂರು: ಬಿಬಿಎಂಪಿಯಿಂದ ಈ ಬಾರಿ ದಸರಾ ಮತ್ತು ದೀಪಾವಳಿ ಹಬ್ಬಗೆ ಮಹತ್ವದ ಮಾರ್ಗಸೂಚಿ ಒಂದು ಬಿಡುಗಡೆಯಾಗಿದ್ದು ಹಬ್ಬಗಳ ದಿನದಂದು ಮಾರ್ಕೆಟ್ ಮತ್ತು ಇನ್ನಿತರ ಸ್ಥಳಗಳಲ್ಲಿ ತ್ಯಾಜ್ಯ ಹೆಚ್ಚು ಉತ್ಪತ್ತಿಯಾಗುವುದರಿಂದ ಪಾಲಿಕೆ ಅಧಿಕಾರಿಗಳಿಗೆ ಇದೀಗ ಬಿಬಿಎಂಪಿ ಗೈಡ್ ಲೈನ್ ಬಿಡುಗಡೆ ಮಾಡಿದೆ.

ಹೌದು, ರಾಜಧಾನಿಯಲ್ಲಿ ತ್ಯಾಜ್ಯ ಸಮಸ್ಯೆಗೆ ಬ್ರೇಕ್ ಹಾಕಲು ಅಧಿಕಾರಿಗಳಿಗೆ ಗೈಡ್ ಲೈನ್ ಮೂಲಕ ಕಮಿಷನರ್ ಸೂಚನೆ ಕೊಟ್ಟಿದ್ದಾರೆ.

ಪಾಲಿಕೆ ಗೈಡ್ ಲೈನ್ ಪ್ರಮುಖಾಂಶಗಳೇನು

ಬಾಳೇಕಂದು, ಮಾವಿನ ತೋರಣ, ಹಬ್ಬದ ವಸ್ತುಗಳಲ್ಲಿ ಹಸಿ, ಒಣ ಕಸ ವಿಂಗಡನೆಗೆ ಕ್ರಮ

ಮಾರುಕಟ್ಟೆಗಳಲ್ಲಿ ಸ್ವಚ್ಚತೆಯ ಬಗ್ಗೆ ವ್ಯಾಪಾರಿಗಳಿಗೆ ಅರಿವು ಮೂಡಿಸಿ

ಏಕಬಳಕೆಯ ಪ್ಲಾಸ್ಟಿಕ್ ಬಳಸದಂತೆ ನಿಗಾ-ಹಬ್ಬದಲ್ಲಿ ಉತ್ಪತಿಯಾಗೋ ಹೆಚ್ಚುವರಿ ತ್ಯಾಜ್ಯ ವಿಲೇವಾರಿಗೆ ತಯಾರಿ

ಬ್ಲಾಕ್ ಸ್ಪಾಟ್ (ಕಸ ಸುರಿಯೋ ಜಾಗ)ಗಳಲ್ಲಿ ನಿಗಾ ಇಡಲು ಸೂಚನೆ

ಬಾಳೆಕಂದು, ಮಾವಿನ ಸೊಪ್ಪು ಇತರೆ ವಸ್ತುಗಳನ್ನ ಹಸಿತ್ಯಾಜ್ಯ ಘಟಕಕ್ಕೆ ನೀಡುವಂತೆ ನಿಗಾ

ಒಟ್ಟಿನಲ್ಲಿ ಘನ ತ್ಯಾಜ್ಯ ಸಂಗ್ರಹವಾಗದಂತೆ ಬಿಬಿಎಂಪಿ ಅಧಿಕಾರಿಗಳಿಗೆ ಇದೀಗ ಮಹತ್ವದ ಸೂಚನೆಯನ್ನು ನೀಡಿದೆ.

ಮೇಲಿನ ನಿರ್ದೇಶನಗಳನ್ನು ಕಟ್ಟುನಿಟಾಗಿ ಪಾಲಿಸಿ ದಸರ ಹಾಗೂ ದೀಪಾವಳಿ ಹಬ್ಬದ ದಿನಗಳಂದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಗಿರಿ ನಾಥ್ ರವರು ಕಛೇರಿ ಆದೇಶದ ಮೂಲಕ ಸೂಚಿಸಿರುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos