ಗುಬ್ಬಿ ಹಾಡು ನಾಟಕ ಪ್ರದರ್ಶನ

ಗುಬ್ಬಿ ಹಾಡು ನಾಟಕ ಪ್ರದರ್ಶನ

ಆನೇಕಲ್, ಆ. 28: ಪರಿಸರ ಕಾಳಜಿ ಅನ್ನೋದು ಮೊದಲು ಶಿಕ್ಷಕರಿಗೆ ಇರಬೇಕು ಪ್ರತಿಯೊಬ್ಬರು ಕೂಡ ಪರಿಸರವನ್ನು ಕಾಪಾಡಬೇಕು ಎಂದು ಬಿ ಆರ್ ಸಿ  ರೂಪ ತಿಳಿಸಿದರು

ಇವತ್ತಿನ ಕಾಲದಲ್ಲಿ ಪ್ರಾಣಿ ಪಕ್ಷಿಗಳ ಸಂತತಿಯೇ ನಾಶವಾಗುತ್ತಿದೆ ಪರಿಸರವನ್ನು ಉಳಿಸಿಕೊಳ್ಳಬೇಕು ಎಂದು ಗುಬ್ಬಿ ಹಾಡು ನಾಟಕದಲ್ಲಿ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ಮಕ್ಕಳಿಗೆ ಸುಭಾಷ್ ಸೇವಾ ಸಂಸ್ಥೆಗೆ ಧನ್ಯವಾದಗಳನ್ನ ಮುಖ್ಯೋಪಾಧ್ಯಾಯರಾದ ನಿರ್ಮಲ ತಿಳಿಸಿದರು.

ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಿಯಾದ ಕಲಾವತಿಯವರು ರವರು  ಮಾತನಾಡಿ ಮಕ್ಕಳು ನಿಜವಾಗಿಯೂ ತುಂಬಾ ಚೆನ್ನಾಗಿ ಮಾಡಿದ್ದಾರೆ. ಅದರಲ್ಲೂ ಹಾಡುಗಳನ್ನು ತುಂಬಾ ಚೆನ್ನಾಗಿ  ಹಾಡಿದರು, ನಾನು ಶಿಕ್ಷಕಿಯಾಗಿ ಈ ರೀತಿಯ ನಾಟಕವನ್ನು ನೋಡಿಯೇ ಇಲ್ಲ ಮಕ್ಕಳಿಗೆ ಮತ್ತು ಸಂಸ್ಥೆಯವರಿಗೆ ಧನ್ಯವಾದಗಳನ್ನು ತಿಳಿಸಿದರು.

ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಗುಬ್ಬಿ ಹಾಡು ನಾಟಕ ಪ್ರದರ್ಶನ ಮಾಡಲಾಯಿತು ತಾಲ್ಲೂಕಿನ ಎಲ್ಲಾ ಶಾಲೆಯ ಮಕ್ಕಳು, ಮಕ್ಕಳ ಪೋಷಕರು, ಶಿಕ್ಷಕರು ನಾಟಕವನ್ನು ವೀಕ್ಷಿಣೆ ಮಾಡಿದರು.

ಸುಭಾಷ್ ಸೇವಾ ಸಂಸ್ಥೆಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲ್ಟಿಮೀಡಿಯಾ ಚಂದ್ರು, ದೇವಂಗ ಪೇಟೆ ಶಾಲೆಯ ಸರೋಜ ,  ನಿರ್ಮಲ ನ್ಯೂಮಿಡಲ್ ಶಾಲೆ ಮುಖ್ಯೋಪಾಧ್ಯಾಯರು, ಗರ್ಲ್ಸ್ ಶಾಲೆಯ ಅಶೋಕ್,  ಉರ್ದು ಶಾಲೆಯ ನಾಗರಾಜು, ಸಬ್ ಮಂಗಳ ವೆಂಕಟೇಶ್ವರ ಶಾಲೆಯ ಮುನಿರಾಜು, ಗಿರಿಜಮ್ಮ,  ಅಂಕುರ ಸಂಸ್ಥೆಯವರು,  ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos