ಬೆಂಗಳೂರು, ಡಿ. 25: ಇತ್ತೀಚಿನ ದಿನಗಳಲ್ಲಿ ನಾವು ಕರಿದಿಸುವ ಪ್ರತಿಯೊಂದು ವಸ್ತುವಿಗೆ ಜಿ.ಎಸ್.ಟಿ. ಕಟ್ಟುವಂತಹ ಸಂದರ್ಭ ಬಂದೊದಗಿದೆ. ಹೌದು ಇನ್ನು ಮುಂದೆ ನಾವು ಕೊಂಡುಕೊಳ್ಳುವ ತರಕಾರಿ ಮತ್ತು ಹಣ್ಣು ಹಂಪಲಗಳಲ್ಲಿ ಮೇಲೆಯು ಕೂಡ ಜಿ.ಎಸ್.ಟಿ ಬೀಳುತ್ತದೆ ಎಂಬುವುದು ಅನುಮಾನಗಳು ಮೂಡಿಬರುತ್ತಿವೆ.
ಜಿ.ಎಸ್.ಟಿ. ವಿಚಾರವಾಗಿ ಸಾಕಷ್ಟು ವಿರೋಧಗಳು ಕೇಳಿ ಬಂದಿದ್ದರೂ ಅನಿವಾರ್ಯವಾಗಿ ನಾವು ಕಟ್ಟಲೇ ಬೇಕಾದ ಪರಿಸ್ಥಿತಿ ಇದೆ. ಇದೀಗ ಈ ಜಿ.ಎಸ್.ಟಿ. ಹಣ್ಣು, ತರಕಾರಿಗಳ ಮೇಲೂ ಬೀಳುತ್ತಾ ಎನ್ನುವ ಅನುಮಾನ ಕಾಡತೊಡಗಿದೆ.
ಹೌದು, ಇದಕ್ಕೆ ಕಾರಣ ಪ್ರಸಕ್ತ ವರ್ಷದಲ್ಲಿ ಜಿ.ಎಸ್.ಟಿ. ಸೆಸ್ ಸಂಗ್ರಹದಲ್ಲಿ ಸುಮಾರು 60 ಸಾವಿರ ಕೋಟಿ ಹಣ ಕೊರತೆಯಾಗುತ್ತದೆ ಎಂಬ ಅಂದಾಜನ್ನು ಅಧಿಕಾರಿಗಳು ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದನ್ನು ತುಂಬಲು ಹಣ್ಣು, ತರಕಾರಿ, ಮಾಂಸ ಸೇರಿದಂತೆ ಜಿ.ಎಸ್.ಟಿ. ವ್ಯಾಪ್ತಿಗೆ ಬರದೇ ಇರುವ ವಸ್ತುಗಳ ಮೇಲೂ ತೆರಿಗೆ ವಿಧಿಸಲು ಅಧಿಕಾರಿಗಳು ಸಮಿತಿ ಸಲಹೆ ನೀಡಿದೆ ಎನ್ನಲಾಗಿದೆ.
ಇನ್ನು ಜಿ.ಎಸ್.ಟಿ. ವ್ಯಾಪ್ತಿಗೆ ಬರದೇ ಇರುವ ಹಾಗೂ ಒಂದಿಷ್ಟು ಉತ್ಪನ್ನಗಳ ಮೇಲೂ ಹೆಚ್ಚಿನ ತೆರಿಗೆ ವಿಧಿಸುವಂತೆ ಸಲಹೆಗಳು ಕೇಳಿಬಂದಿವೆ. ಹಾಗೂ ಕಡಿಮೆ ಇರುವ ತೆರಿಗೆಗೆ ಹೆಚ್ಚಿನ ತೆರಿಗೆ ಹಾಕಿದ್ದಲ್ಲಿ ಕೊರತೆಯಾಗುವ ಹಣವನ್ನು ಸರಿದೂಗಿಸಬಹುದು ಎಂಬ ಮಾತು ಕೇಳಿ ಬಂದಿದ್ದು, ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆಯಂತೆ.