‘ಗ್ರೀನ್ ಟೀ’ ಆರೋಗ್ಯಕ್ಕೆ ಉತ್ತಮ

‘ಗ್ರೀನ್ ಟೀ’ ಆರೋಗ್ಯಕ್ಕೆ ಉತ್ತಮ

ಬೆಂಗಳೂರು, ಅ. 5 : ಒಳ್ಳೆಯ ಗುಣಮಟ್ಟದ ನಿದ್ದೆ, ದೇಹಕ್ಕೂ ಅಗತ್ಯ ವಿಶ್ರಾಂತಿ ಲಭಿಸುತ್ತದೆ. ಮಲಗುವ ಮುಂಚೆ ಯಾವುದಾದರೊಂದು ಬಿಸಿಯಾದ ಪಾನೀಯವನ್ನು ಕುಡಿದು ಮಲಗಬೇಕೆಂದು ಆಸೆಪಡುತ್ತಾರೆ. ಅಂದರೆ ಕೆಲವರಿಗೆ ಮಲಗೋ ಮುಂಚೆ ಒಂದು ಲೋಟ ಬಿಸಿ ಹಾಲು ಅಥವಾ ಒಂದು ಲೋಟ ಬಿಸಿನೀರು ಅಥವಾ ಬಿಸಿ ಕಾಫಿ ಹೀಗೆ ಒಬ್ಬೊಬ್ಬರುಒಂದೊಂದು ರೀತಿ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇವೆಲ್ಲದರ ಬದಲು ಒಂದು ಕಪ್ ಗ್ರೀನ್ ಟೀ ಕುಡಿಯಲು ಅಭ್ಯಾಸ ಮಾಡಿಕೊಂಡರೆ ಅದರಿಂದ ಅನೇಕ ಪ್ರಯೋಜನಗಳು ನಿಮಗೆ ಆಗುತ್ತವೆ ಎಂದು ನಿಮಗೆ ಇದುವರೆಗೂ ಗೊತ್ತಿರಲಿಕ್ಕಿಲ್ಲ.
ಸಹಜವಾಗಿಯೇ ಗ್ರೀನ್ ಟೀ ನಲ್ಲಿ ಗಿಡದ ಪೋಷಕಾಂಶಗಳು ಮತ್ತು ಸಂಯುಕ್ತಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಅದರಲ್ಲೂ ಮಲಗುವ ಮುಂಚೆ ಗ್ರೀನ್ ಟೀ ಕುಡಿದು ಮಲಗಿದರೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮಂದಿಗೆ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಒಳ್ಳೆಯ ನಿದ್ದೆ ಬರಲು ಗ್ರೀನ್ ಟೀ ಸಹಾಯ ಮಾಡುತ್ತದೆ.
ಮೊದಲಿಗಿಂತ ಇತ್ತೀಚಿನ ದಿನಗಳಲ್ಲಿ ಗ್ರೀನ್ ಟೀ ಬಹಳ ಸೇವಿಸಬಹುದು.

ಫ್ರೆಶ್ ನ್ಯೂಸ್

Latest Posts

Featured Videos