ಬೆಂಗಳೂರು, ಜು. 8 : ದೋಸ್ತಿ ಸರ್ಕಾರ ಪ್ರಕ್ಷುಬ್ಧ ಬೆಳವಣಿಗೆ ಪಾರು ಮಾಡಲು, ಇಂದು ಸಚಿವ ಹೆಚ್ ಡಿ ರೇವಣ್ಣ ವಿಧಾನಸೌಧಕ್ಕೆ ಬರಿಗಾಲಲ್ಲೇ ನಡೆದು ಬಂದು ಅಚ್ಚರಿ. ತಮ್ಮನ ಸರ್ಕಾರ ಉಳಿಸಲು ಅಣ್ಣ ಬರಿಗಾಲ ಸೇವೆ ಮಾಡ್ತಾ ಇದ್ದಾರಾ ಎಂಬ ಕುತೂಹಲ ಮೂಡಿದೆ. ಲೋಕೋಪಯೋಗಿ ಸಚಿವ ಹೆಚ್. ಡಿ. ರೇವಣ್ಣ ಅವರು, ತಮ್ಮನ ಸರ್ಕಾರ ಉಳಿಸಲು ಬರಿಗಾಲ ಸೇವೆಯನ್ನು ಮಾಡ್ತಾ ಇದ್ದಾರಂತೆ. ಸಚಿವ ಹೆಚ್ ಡಿ ರೇವಣ್ಣ, ಇಂದು ಕೂಡ ವಿಧಾನಸೌಧಕ್ಕೆ ಬರಿಗಾಲಲ್ಲೇ ನಡೆದು ಬಂದು ಎಲ್ಲರ ಗಮನ ಸೆಳೆದರು.
ಅಂದಹಾಗೇ ರೇವಣ್ಣ ಕಳೆದ ಎರಡು ದಿನಗಳಿಂದ ಬರಿಗಾಲಿನಲ್ಲೇ ನಡೆಯುತ್ತಿದ್ದಾರಂತೆ. ಈ ಮೂಲಕ ಎಲ್ಲಾ ಕಡೆಯಲ್ಲೂ ಚಪ್ಪಲಿ ಬಿಟ್ಟು ಬರಿಗಾಲಲ್ಲೇ ಓಡಾಟ ಮಾಡುತ್ತಿದ್ದಾರಂತೆ. ಹಾಗಾದರೇ ಇದೇನ್ ಹೊಸ ಹರಕೆ, ಸೇವೆಯೇ ಎಂಬ ಅನುಮಾನವನ್ನು ನೋಡಿದ ಎಲ್ಲರಲ್ಲೂ ಮೂಡುವಂತಾಗಿದೆ.