ಬೆಂಗಳೂರು, ಮೇ.24, ನ್ಯೂಸ್ ಎಕ್ಸ್ ಪ್ರೆಸ್ : ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಇನ್ನೂ 4 ವರ್ಷವೂ ಮುಂದುವರಿಯಲಿದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಹೀನಾಯ ಸೋಲಿನ ಬಳಿಕ ನಗರದಲ್ಲಿ ಸಿಎಂ-ಡಿಸಿಎಂ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ಶಾಸಕರು ನಮ್ಮ ಜೊತೆಯಲ್ಲಿದ್ದಾರೆ. ಸರ್ಕಾರಕ್ಕೆ ಯಾವುದೇ ಅಭದ್ರತೆ ಇಲ್ಲ. ರಾಷ್ಟ್ರ ಸರ್ಕಾರಕ್ಕೆ ಜನಾದೇಶ ಇದೆ. ದೇಶದ ಆಡಳಿತವನ್ನು ನಡೆಸಲು ಬಿಜೆಪಿಯವರಿಗೆ ಜನಾದೇಶ ಸಿಕ್ಕಿದೆ. ಅವರು ನಡೆಸಿಕೊಳ್ಳುತ್ತಾರೆ. ರಾಜ್ಯ ಸರ್ಕಾರಕ್ಕೆ ಈಗಾಗಲೇ ಕಳೆದ ವರ್ಷ ಜನಾದೇಶ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ನಾವು ಸಮ್ಮಿಶ್ರ ಸರ್ಕಾರವನ್ನು ನಡೆಸುತ್ತಿದ್ದೇವೆ ಎಂದರು.