ಬೆಂಗಳೂರು: ಈ ಮಧ್ಯೆ ಬಿಬಿಎಂಪಿ ಗುತ್ತಿಗೆದಾರರಿಗೆ ಬಾಕಿ ಬಿಲ್ ಮೊತ್ತವನ್ನು ಪಾವತಿ ಮಾಡಿದ್ದರೂ ಕೂಡ ಇತ್ತ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಪಾಲಿಕೆ ಬಿಗ್ ಶಾಕ್ ನೀಡಿದೆ. ರಾಜಾರಾಜೇಶ್ವರಿ ನಗರ ವಿಧಾನಸಭಾ ವ್ಯಾಪ್ತಿಯ ಕೆಲ ವಾರ್ಡ್ ಗಳ ಕಾಮಗಾರಿಗಳ ಬಿಲ್ ಅನ್ನು ಬಿಬಿಎಂಪಿ ಇನ್ನೂ ಕ್ಲಿಯರ್ ಮಾಡಿಲ್ಲ. ಆ ಮೂಲಕ ಆರ್ ಆರ್ ನಗರ ಶಾಸಕ ಮುನಿರತ್ನಗೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ ಡಿಚ್ಚಿ ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ.
ಬಿಬಿಎಂಪಿ ಗುತ್ತಿಗೆದಾರರಿಗೆ ಪಾಲಿಕೆಯು ಗುಡ್ ನ್ಯೂಸ್ ನೀಡಿದ್ದು, ಎರಡನೇ ಕಂತಿನ ಭಾಗವಾಗಿ 73.07 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲು ಬಿಬಿಎಂಪಿ ಅನುಮೋದನೆ ನೀಡಿದೆ. 2021ರ ಅಕ್ಟೋಬರ್ ತಿಂಗಳ ಕಾಮಗಾರಿಯ ಬಿಲ್ ಅನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಡುಗಡೆ ಮಾಡಿದ್ದು, ಆದರೆ ಈ ಅವಧಿಯಲ್ಲಿ ಆಗಿರುವ ಕಾಮಗಾರಿಗಳ ಪೈಕಿ SIT ತನಿಖೆಗೆ ಒಳಪಟ್ಟಿರುವ ಕಾಮಗಾರಿಗಳ ಬಿಲ್‌ಗೆ ತಡೆ ನೀಡಲಾಗಿದೆ.