ಚೆನ್ನೈ, ಮೇ. 8, ನ್ಯೂಸ್ ಎಕ್ಸ್ ಪ್ರೆಸ್: ಚೆನ್ನೈನ ಟಿ. ನಗರದಲ್ಲಿರುವ ರೂಬಿ ಗೋಲ್ಡ್ ಜುವೆಲರ್ಸ್ ಮಾಲೀಕ ಸೈಯದ್ ಇಬ್ರಾಹಿಂ ಜನರನ್ನು ವಂಚಿಸಿ 300 ಕೋಟಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾನೆ.
ಜನರಿಂದ ಅಡವಿರಿಸಿಕೊಂಡಿದ್ದ ಸುಮಾರು 1000 ಕೆಜಿ ತೂಕದ 300 ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣಗಳೊಂದಿಗೆ ವರ್ತಕ ಪರಾರಿಯಾಗಿದ್ದಾನೆ.
ಬಡ್ಡಿ ರಹಿತವಾಗಿ ಸಾಲ ನೀಡುವುದಾಗಿ ಆಮಿಷವೊಡ್ಡಿದ್ದ ವರ್ತಕ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದು, ಕಂಗಾಲಾಗಿರುವ ಜನ ಪೊಲೀಸರ ಮೊರೆ ಹೋಗಿದ್ದಾರೆ.
ಬಡ್ಡಿ ರಹಿತ ಸಾಲ ನೀಡುವುದಾಗಿ ಆಮಿಷ ಒಡ್ಡಿದ್ದ ಆತ, ಅಡವಿಟ್ಟ ಚಿನ್ನದ ಮೌಲ್ಯದ ಮೇಲೆ ಶೇ. 33 ರಷ್ಟು ಹಣವನ್ನು ಸಾಲವಾಗಿ ನೀಡುತ್ತಿದ್ದ. 3 ತಿಂಗಳು, 6 ತಿಂಗಳು, 1 ವರ್ಷ ಅವಧಿಗೆ ಸಾಲ ಕೊಡುತ್ತಿದ್ದ. ಆತ ಜನರನ್ನು ವಂಚಿಸಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.