ಚಿಕ್ಕಮಗಳೂರು, ಮಾ.12, ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿ ವರಿಷ್ಠರು, ಸಂಸದೀಯ ಮಂಡಳಿ ಯಾರಿಗೆ ಟಿಕೆಟ್ ನೀಡುತ್ತಾರೆ ಅವರ ಪರವಾಗಿ ನಾನು ಸೇರಿದಂತೆ ಎಲ್ಲರೂ ಕಾರ್ಯನಿರ್ವಹಿಸುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಟಿಕೆಟ್ ಅಪೇಕ್ಷಿಸುವುದು ತಪ್ಪಲ್ಲ, ಆದರೆ ಪಕ್ಷದ ವಿರುದ್ಧ ಕೆಲಸ ಮಾಡಬಾರದು ಎಂದು ಶೋಭಾ ‘ಗೋಬ್ಯಾಕ್’ ವಿಷಯವನ್ನು ಪ್ರಸ್ತಾಪಿಸಿದಾಗ ಈ ರೀತಿ ಉತ್ತರಿಸಿದರು.
ಯಾವುದೇ ಮುಖಂಡರು ಟಿಕೆಟ್ ಅಪೇಕ್ಷಿಸುವುದು ಸಹಜ ಆದರೆ ಪಕ್ಷದ ವಿರುದ್ಧ ಕೆಲಸ ಮಾಡಬಾರದು ಎಂದ ಅವರು, ಟಿಕೆಟ್ ಅಪೇಕ್ಷೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಕೊಡಲಾಗುವುದಿಲ್ಲ ಇಲ್ಲ ಸ್ಪಷ್ಟಪಡಿಸಿದರು. ಒತ್ತುವರಿ ರಾಜ್ಯದ ಸಮಸ್ಯೆಯಾಗಿದ್ದು ಒಂದನ ವರದಿ ವಿಷಯವನ್ನು ಕೇಂದ್ರದಲ್ಲಿ ಪ್ರಸ್ತಾಪಿಸುವುದು ರಾಜ್ಯಕ್ಕೆ ತೊಡಕಾಗುವುದಿಲ್ಲ ರಾಜ್ಯಕ್ಕೆ ಭರವಸೆ ದೊರಕಿದೆ.
ಕೇಂದ್ರದ ಭದ್ರತೆ ಸಮಿತಿ ಸದಸ್ಯೆ ಆಗಿದ್ದು ನಾನು ರಾಜ್ಯ ಬಿಜೆಪಿ ಪ್ರದಾನ ಕಾರ್ಯದರ್ಶಿ ಆಗಿದ್ದರಿಂದ ಜಿಲ್ಲೆಯಲ್ಲಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಮುಂಬರುವ ದಿನಗಳಲ್ಲಿ ಹೆಚ್ಚು ಪ್ರವಾಸ ಮಾಡುವುದಾಗಿ ತಿಳಿಸಿದರು.
ಅಭಿವೃದ್ಧಿ, ದೇಶದ ಭದ್ರ, ರಾಜ್ಯ ಸರಕಾರದ ವೈಫಲ್ಯ ಮುಂದಿಟ್ಟುಕೊಂಡು ಈ ಬಾರಿ ಲೋಕಸಭಾ ಚುನಾವಣೆ ಎದುರಿಸಲಾಗುವುದು ಕೇಂದ್ರ-ರಾಜ್ಯಕ್ಕೆ ಏನೆಲ್ಲಾ ಸೌಲಭ್ಯ ಆಯಿತು ಎಂದು ಮತದಾರರ ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕಿದೆ.
ಪ್ರಧಾನಿ ಮತ್ತು ಅವರ ಸಚಿವ ಸಂಪುಟ ಹಗರಣಗಳ ರಹಿತ ಆಡಳಿತ ನಡೆಸಿದ್ದು ಉಜ್ವಲ ಗ್ಯಾಸ್, ಸ್ವಚ್ಛ ಭಾರತ್ ಅಭಿಯಾನ, ವಸಂತ ಬೀಮಾ ಯೋಜನೆ, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ, ಸೌಭಾಗ್ಯ ಯೋಜನೆ ಇವೆಲ್ಲವೂ ಮುಖ್ಯ ಯೋಜನೆಗಳಾಗಿದ್ದು ಈ ಎಲ್ಲ ಯೋಜನೆಗಳಿಗೆ ಕೇಂದ್ರ ರಾಜ್ಯಕ್ಕೆ ಹಣ ಬಿಡುಗಡೆಗೊಳಿಸಿದರೆ ಅದನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಟೀಕಿಸಿದರು. ಶಾಸಕ ಡಿ.ಎಸ್.ಸುರೇಶ್, ಜಿಪಂ.ಅಧ್ಯಕ್ಷೆ ಸುಜಾತಾ, ಬಿಜೆಪಿ ಜಿಲ್ಲಾಧ್ಯಕ್ಷ ಜೀವನ್‍ರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.