ಬೆಂಗಳೂರು, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಟ್ರಾಯ್ ನಿಯಮದಿಂದಾಗಿ ಕೇಬಲ್ ಬಿಲ್ ಹೆಚ್ಚಳಗೊಂಡು ಬೇಸತ್ತಿದ್ದ ಜನರಿಗೆ ಜಿಯೋವಿನಿಂದ ಗುಡ್‌ನ್ಯೂಸ್ ಸಿಕ್ಕಿದೆ. ಕಳೆದ ಹಲವು ತಿಂಗಳುಗಳಿಂದಲೂ ದೇಶದ ಮಾರುಕಟ್ಟೆಯಲ್ಲಿ ಭಾರೀ ಕುತೋಹಲ ಮೂಡಿಸಿರುವ ಜಿಯೋ ‘ಗೀಗಾ ಫೈಬರ್’ ಶೀಘ್ರವೇ ಬಿಡುಗಡೆಯಾಗಲಿದ್ದು, ಕೇವಲ 600 ರೂ.ಗಳಿಂದ ಪ್ರತಿ ತಿಂಗಳ ಸೇವೆ ದೊರೆಯಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ರಿಲಯನ್ಸ್ ಜಿಯೋ ಗೀಗಾಫೈಬರ್ ಬ್ರಾಡ್ಬ್ಯಾಂಡ್-ಲ್ಯಾಂಡ್ಲೈನ್-ಟಿವಿ ಕಾಂಬೊ ಸೇವೆಗೆ ತಿಂಗಳಿಗೆ ರೂ. 600 ಮತ್ತು ಹೆಚ್ಚುವರಿ ಸೌಲಭ್ಯಗಳು ಮತ್ತು ಅದರ ಸ್ಮಾರ್ಟ್ ಹೋಮ್ ನೆಟ್ವರ್ಕ್ಗೆ ಕನಿಷ್ಠ ರೂ. 1,000 ವರೆಗೆ ಸಂಪರ್ಕ ಕಲ್ಪಿಸುವ ಆಯ್ಕೆಯನ್ನು ನೀಡಲಿದೆ. ದೇಶದ ಒಟ್ಟು 1600 ನಗರಗಳಲ್ಲಿ ‘ಗೀಗಾ ಫೈಬರ್’ ಒಂದೇ ಬಾರಿಗೆ ಲಾಂಚ್ ಆಗಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಮೊಬೈಲ್, ಸ್ಮಾರ್ಟ್‌ಟಿವಿ, ಲ್ಯಾಪ್‌ಟಾಪ್‌ಗಳು ಸೇರಿದಂತೆ 40-45 ಸ್ಮಾರ್ಟ್ ಸಾಧನಗಳನ್ನು ಸಂಪರ್ಕಿಸುವ ONT (ಆಪ್ಟಿಕಲ್ ನೆಟ್ವರ್ಕ್ ಟರ್ಮಿನಲ್) ಬಾಕ್ಸ್ ರೂಟರ್ ಮೂಲಕ ಚಾಲಿತ ಜಿಯೋ ಗೀಗಾಫೈಬರ್ ಬೆಲೆ ಕೂಡ ಎಷ್ಟಿರಬಹುದು ಕುತೂಹಲಕ್ಕೆ ತೆರೆ ಬಿದ್ದಿದೆ. ನೀವು ಈಗಾಗಲೇ ಜಿಯೋ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಜಿಯೋ ಗೀಗಾ ಫೈಬರ್ಗೆ ನೊಂದಣಿ ಮಾಡಿಕೊಳ್ಳಬಹುದಾಗಿದ್ದು, ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ‘ಇನ್‌ವೈಟ್ ಜಿಯೋಗೀಗಾಫೈಬರ್’ ಆಯ್ಕೆಯಲ್ಲಿ ಜಿಯೋಗೀಗಾಫೈಬರ್ ಅನ್ನು ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಜಿಯೋ ಗೀಗಾ ಫೈಬರ್ ಖರೀದಿಸುವವರು ತಮ್ಮ ವಿಳಾಸ, ಮೊಬೈಲ್ ನಂಬರ್ ಮತ್ತು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವ ಮೂಲಕ ಜಿಯೋ ಗೀಗಾ ಫೈಬರ್ ಅನ್ನು ಮೊದಲು ಖರೀದಿಸಬಹುದಾದ ಆಯ್ಕೆ ನೀಡಲಾಗಿದೆ.