ಬೆಳ್ಳುಳ್ಳಿ ಕಬಾಬ್ ಸಿಕ್ಕಾಪಟ್ಟೆ ವೈರಲ್: ಬೆಳ್ಳುಳ್ಳಿ ಬೆಲೆ ಏರಿಕೆ

ಬೆಳ್ಳುಳ್ಳಿ ಕಬಾಬ್ ಸಿಕ್ಕಾಪಟ್ಟೆ ವೈರಲ್: ಬೆಳ್ಳುಳ್ಳಿ ಬೆಲೆ ಏರಿಕೆ

ಬೆಂಗಳೂರು: ಬೆಲೆ ಬಿಸಿ ಜನಸಾಮಾನ್ಯರ ಮೇಲೆ ಕೊಂಚ ಒತ್ತಡ ಏರಿದಂತೆ ಕಾಣುತ್ತಿದೆ. ದರ ಏರಿಕೆಯ ಬೆನ್ನಲ್ಲೇ ಬೆಳ್ಳುಳ್ಳಿ ಕಬಾಬ್ ದರ ದುಬಾರಿಯಾಗಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಸಾಮಾನ್ಯವಾಗಿ ನಾವೆಲ್ಲ ನೋಡಿರುವಂತೆ ಏಕ ಏಕೀ ಟಮಾಟೊ, ಈರುಳ್ಳಿ ಬೆಲೆಗಳಲ್ಲಿ ಮಾತ್ರ ದಿಢೀರ್ ಏರಿಕೆ ಕಾಣುತ್ತಿದ್ದು ಈ ತರ ಏರಿಕೆ ಬಿಸಿಯಿಂದ ಜನರು ತತ್ತರಿಸುತ್ತಿದ್ದರು.

ಆದರೆ ಕೆಲವು ದಿನಗಳ ನಂತರ ದರದಲ್ಲಿ ಇಳಿಕೆ ಕಂಡು ಬರುತ್ತಿದ್ದನ್ನು ಗಮನಿಸಿದ್ದೇವೆ. ಇದೀಗ ಈ ಗಾಳಿ ಬೆಳ್ಳುಳ್ಳಿ ಬೀಸಿದೆ  ಅಡುಗೆ ಮನೆಯಲ್ಲಿ  ಬೆಳ್ಳುಳ್ಳಿ ಇಲ್ಲದ ಅಡುಗೆ ಇಲ್ಲಾ ಈ ಬೆಳ್ಳುಳ್ಳಿ ಗೆ ಎಲ್ಲಿಲ್ಲದ ಬೇಡಿಕೆ, ಸದ್ಯ ಬೆಳ್ಳುಳ್ಳಿ ಬಂಪರ್ ಬೆಲೆ ಬಂದಿದ್ದು.

ಈ ಕಾರಣಗಳಿಂದ ದಿಡೀರ್ ಬೆಳ್ಳುಳ್ಳಿ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸಿದೆ. ಮಳೆ ಕೊರತೆಯಿಂದ ರಾಜ್ಯದ ಚಿಲ್ಲರೆ ಮಾರುಕಟ್ಟೆಗಳಲ್ಲಿ ನಾಟಿ ಹಾಗೂ ಹೈಬ್ರೀಡ್ ಬೆಳ್ಳುಳ್ಳಿ ದರ ಗಗನಕೇರಿದೆ ರಾಜ್ಯದಲ್ಲಿ ಕಳೆದ ಡಿಸೆಂಬರ್ ನ ಮೂರನೇ ವಾರದಲ್ಲಿ ಬೆಳ್ಳುಳ್ಳಿ ದರವು ಏರಿಕೆಯ ಅಂದಿನಿಂದ ಹಿಡಿದಿದ್ದು ಇಂದಿನಿಂದ ಇಲ್ಲಿಯವರೆಗೆ ಬೆಲೆ ಇಳಿಕೆ ಕಂಡಿಲ್ಲ.ಕೆಜಿಗೆ 440 ರಿಂದ 500 ವರೆಗೂ ಏರಿಕೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos