ಗಂಡನ ಮನೆ ಕಿರುಕೂಳ: ತಾಯಿ ಮಹಳ ಆತ್ಮ ಹತ್ಯೆಗೆ ಯತ್ನ

ಗಂಡನ ಮನೆ ಕಿರುಕೂಳ:  ತಾಯಿ ಮಹಳ ಆತ್ಮ ಹತ್ಯೆಗೆ ಯತ್ನ

ಬೆಂಗಳೂರಿನ, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ಗಂಡನ ಮನೆಯ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನ,ಈ ಘಟನೆ  ಕೆಪಿ ಅಗ್ರಹಾರದಲ್ಲಿ ಸಂಭವಿಸಿದ್ದು, ತಾಯಿ ಶಶಿಕಲಾ, ಮಗಳು ಪಲ್ಲವಿ ಮಾತ್ರೆ ತೆಗೆದ್ಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೌಟುಂಬಿಕ ಕಲಹದ  ಹಿನ್ನಲೆಯಲ್ಲಿ ಗಂಡ ಮಹೇಶ್ ಕುಮಾರ್ ನಿಂದ ಶಶಿಕಲಾ ದೂರವಾಗಿದ್ದು, ತಾಯಿ ಜೊತೆ ಉಳಿದಿಕೊಂಡಿದ್ದ ಮಗಳು ಪಲ್ಲವಿ ಕೂಡ ಅಪ್ಪನಿಂದ ದೂರವಾಗಿದ್ದಳು.

ಗಂಡನ ಕಡೆಯಿಂದ ಕಿರುಕೂಳ ತಾಳಲಾರದೆ ಅಮ್ಮ- ಮಗಳು ಸುಮಾರು ಭಾರಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದರು.

ಕೋರ್ಟ್ ಮುಗಿಸಿಕೊಂಡು ಬರುವಾಗ ತಾಯಿ-ಮಗಳ ಮೇಲೆ ಗಂಡ ಮಹೇಶ್ ಕುಮಾರ್ ದುಶ್ಕರ್ಮಿಗಳನ್ನ ಬಿಟ್ಟು ಮಗಳು ಮತ್ತು ಹೆಂಡತಿ ಮೇಲೆ ಹಲ್ಲೆ ನಡೆಸಿದರು.

ಅವಾಚ್ಯ ಪದಗಳಿಂದ ನಿಂದನೆ ಮಾಡಲಾಗಿತ್ತು ಇದರಿಂದ ಮನನೊಂದು ಆತ್ಯಹತ್ಯೆ ಗೆ ಯತ್ನಿಸಿದ ಅಮ್ಮ-ಮಗಳು,ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

ಇನ್ನೂ ಈ ಪ್ರಕರಣ ಕೆ.ಪಿ ಅಗ್ರಹಾರ ಪೊಲೀಸ್ ಠಾಣಾಯಲ್ಲಿ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos