ಚಾಮರಾಜನಗರ, ಸೆ. 3: ನಾಡಿನಾದ್ಯಂತ ಗಣೇಶ ಹಬ್ಬವನ್ನ ಬಹಳ ವಿಜೃಂಭಣಿಯಿಂದ ಆಚರಿಸಲಾಗುತಿದ್ದು, ಜಿಲ್ಲೆಯ ಕೊಳ್ಳೇಗಾಲದ ದೇವಾಂಗ ಪೇಟೆಯಲ್ಲಿರುವ ಪಟ್ಟಣದ ಮಕ್ಕಳ ಮಹದೇಶ್ವರ ದೇವಸ್ಥಾನದಲ್ಲಿರುವ ಗಣಪತಿಗೆ ಮುಸ್ಲಿಂ ಬಾಂಧವರು ಪೂಜೆ ಸಲ್ಲಿಸಿದ್ದಾರೆ.
ಗಣೇಶ ಚತುರ್ಥಿಗೆ ಹಿಂದೂ ಮುಖಂಡರು, ಮುಸ್ಲಿಂರನ್ನು ಬರಮಾಡಿಕೊಂಡಿದ್ದು, ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ಸ್ವೀಕರಿಸಿದ್ದಾರೆ. ಗಣಪತಿ ಪೂಜೆಗೆ ಬಂದ ಮುಸ್ಲಿಂ ಸಮುದಾಯದವರಿಗೆ ಹಿಂದೂ ಸಮುದಾಯದ ಮುಖಂಡರು ಗುಲಾಬಿ ಹೂವು ನೀಡಿ ಸ್ವಾಗತಿಸಿದರು. ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದ ಮುಖಂಡರು ಹಿಂದೂಗಳಿಗೆ ಸಿಹಿ ಹಂಚಿದರು.