ಮಂಡ್ಯ, ಸೆ. 26: ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ನಿನ್ನೆ ವಿಧಿವಶರಾದ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ವೆಂಕಟ ಸುಬ್ಬೆಗೌಡರ ಅಂತಿಮ ದರ್ಶನ ಪಡೆದ ನಂತರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ನನ್ನ ಟೀಕೆ ಮಾಡೋರಿಗೆ ಯೋಗ್ಯತೆ ಇದೆಯಾ..?
ಸಾಲ ಮನ್ನಾ ಮಾಡಿದ ವಿಧಾನ ಸರಿಯಿಲ್ಲ ಎಂದು ಸಿದ್ದರಾಮಯ್ಯ ಟೀಕೆ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ, “ನನ್ನ 14 ತಿಂಗಳ ಸಾಧನೆಯನ್ನು ಪುಸ್ತಕ ಮಾಡಿಸಿ ಪ್ರತಿ ತಾಲೂಕಿಗೂ ಕಳುಹಿಸಿ ಕೊಡುತ್ತೇನೆ. ಸಾಲ ಮನ್ನಾ ಮಾಡಿದರೆ ಪ್ರಯೋಜನವಿಲ್ಲ ಎಂದು ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ್ದು, ರೈತರಿಗೆ ಪ್ರಯೋಜನವಾಯ್ತು, ಎಂದು ವ್ಯಂಗವಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಗೆಲುವಿಗಾಗಿ ಶ್ರಮಿಸಿದ್ದೇವೆ. ಸುಮಲತಾರನ್ನು ಕಾಂಗ್ರೆಸ್ ಅಭ್ಯರ್ಥಿಯೇ ಎಂದು ಭಾವಿಸಿ ಇಡೀ ಪಕ್ಷ ಜೆಡಿಎಸ್ ಅಭ್ಯರ್ಥಿ ವಿರುದ್ಧ ಟೊಂಕ ಕಟ್ಟಿ ನಿಂತು ಗೆಲ್ಲಿಸಿದ್ದೇವೆ, ಎಂದಿದ್ದರು. ಈ ವಿಚಾರವಾಗಿ ಸಿಟ್ಟಾಗಿರುವ ಎಚ್.ಡಿ.ಕೆ ಸ್ವಾಭಿಮಾನ ಏನು ಅನ್ನೋದನ್ನ ತೋರಿಸಿ ಕೊಟ್ಟವರಂತೆ. ಹೀಗೆಂದು ಕೆ.ಆರ್.ಪೇಟೆ ಕಾಂಗ್ರೆಸ್ ಮಾಜಿ ಶಾಸಕ ಹೇಳುತ್ತಾರೆ, ಎಂದು ಕುಹಕವಾಡಿದರು.