ಬೆಂಗಳೂರು: ಜರ್ಮನ್ ಫುಟ್ಬಾಲ್ ದಂತಕಥೆ ಫ್ರಾಂಜ್ ಬೆಕೆನ್ಬಾರ್ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಕುಟುಂಬ ಖಚಿತಪಡಿಸಿದ್ದಾರೆ. ಬೆಕೆನ್ಬಾರ್ ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.
ಫುಟ್ಬಾಲ್ ದಿಗ್ಗಜ ಆಟಗಾರ ಜರ್ಮನಿಯ ಫ್ರಾಂಜ್ ಬೆಕೆನ್ಬಾರ್ (78) ಅವರು ನಿಧನರಾಗಿದ್ದಾರೆ. ಫ್ರಾಂಜ್ ಕುಟುಂಬದ ಮೂಲಗಳು ಅವರ ನಿಧನದ ಸುದ್ದಿಯನ್ನು ಖಚಿತಪಡಿಸಿವೆ. ಈ ದಿಗ್ಗಜ ಕೇವಲ ಆಟಗಾರನಾಗಿ, ಅಲ್ಲದೇ ಕೋಚ್ ಆಗಿ ಜರ್ಮನಿ ದೇಶಕ್ಕೆ ಎರಡು ಫಿಫಾ ವಿಶ್ವಕಪ್ ಗೆದ್ದು ಕೊಟ್ಟಿದ್ದಾರೆ.