ಮಹದೇವಪುರ:ಅನ್ವಯ ಫೌಂಡೇಷನ್ ಅಡಿಯಲ್ಲಿ ಎಸ್.ಬಿ.ಆರ್ ಗ್ರೂಪ್ ವತಿಯಿಂದ ಕೆ. ದೊಮ್ಮಸಂದ್ರ ಸರ್ಕಾರಿ ಪ್ರಾಥಮಿಕ ಶಾಲೆ ದತ್ತಿಗೆ ಪಡೆದು ಖಾಸಗಿ ಶಾಲೆ ಮಾದರಿಯಲ್ಲಿ ಮೂಲ ಸೌಲಭ್ಯ ಒದಗಿಸಲಾಗುವುದು ಎಂದು ಅನ್ವಯ ಪೌಂಡೇಷನ್ ಕ್ಲಬ್ ನ ಯುವ ಸದಸ್ಯ ಲಿಖಿತ್ ಶ್ರೀನಿವಾಸ್ ತಿಳಿಸಿದರು.
ಕ್ಷೇತ್ರದ ಕೆ.ದೊಮ್ಮಸಂದ್ರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾಂದಿ ಜಯಂತಿ ಆಚರಣೆ ಹಾಗು ಶಾಲೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ವೇದಿಕೆ ಯನ್ನು ಆರಂಬಿಸಿ ಅವರು ಮಾತನಾಡಿದರು.
ಅನ್ವಯ ಫೌಂಡೇಷನ್ ವತಿಯಿಂದ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳನ್ನು ಸುಧಾರಿಸುವ ಮತ್ತು ಸ್ಥಳೀಯ ಕಾರ್ಮಿಕರಿಗೆ ಕೆಲಸದ ಅವಕಾಶ ಮಾಡಲಾಗುವುದೆಂದರು. ಇದೆ ವರ್ಷ ಮಾರ್ಚ್ ತಿಂಗಳಲ್ಲಿ ಸರ್ಕಾರ ಶಾಲೆಗಳನ್ನು ಮುಚ್ಚಲು ಮತ್ತು ಆನ್‌ಲೈನ್ ಕಲಿಕೆಯ ವಿಧಾನಗಳಿಗೆ ತೆರಳಬೇಕಾದಾಗ, ಸರ್ಕಾರಿ ಶಾಲೆಗಳಿಗೆ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಸೌಲಭ್ಯಗಳಲ್ಲಿನ ಅಸಮಾನತೆಯನ್ನು ಸರಿಪಡಿಸುವ ಕಾರ್ಯ ಮಾಡಲಾಗಿದೆ ಎಂದರು. ದೈನಂದಿನ ಕೂಲಿ ಕಾರ್ಮಿಕರ ದುಃಸ್ಥಿತಿಯ ಬಗ್ಗೆ ಸುದ್ದಿಗಳ ಮೂಲಕ ನಿರಂತರವಾಗಿ ತಿಳಿದು ಅವಶ್ಯ ವಸ್ತುಗಳನ್ನು ಒದಗಿಸುವ ಕಾರ್ಯ ಮಾಡಲಾಗಿದೆ ಎಂದರು.
ಅನ್ವಯ ಫೌಂಡೇಷನ್ ಸಹ ಸಂಸ್ಥಾಪಕಿ ಶ್ರೀದೇವಿ ಶೆಟ್ಟಿ ಮಾತನಾಡಿ, ಅತ್ಯಂತ ಕಿರಿಯ ವಯಸ್ಸಿನಲ್ಲೇ ಸಾಮಾಜಿಕ ಕಳಕಳಿಯಿಂದ ಸಮಾಜ ಸೇವೆ ಮಾಡುತ್ತಿರುವ ನಮ್ಮ ಫೌಂಡೇಶನ್ ಯುವ ಸದಸ್ಯ ಲಿಖಿತ್ ಶ್ರೀನಿವಾಸ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಶ್ಯಕಯಿರುವ ಶಾಲಾ ಶುಲ್ಕ ಹಾಗು ಉನ್ನತ ವಿದ್ಯಾಭ್ಯಾಸ ಮಾಡಲು ಉತ್ತೇಜನ ನೀಡಲಾಗುವುದೆಂದರು. ಕೆ.ದೊಮ್ಮಸಂದ್ರ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಈಗಾಗಲೆ ದತ್ತು ತೆಗೆದುಕೊಂಡಿದ್ದು ಅದಕ್ಕೆ ಬೇಕಾಗುವ ಎಲ್ಲಾ ರೀತಿ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು. ಎಸ್.ಬಿ.ಆರ್.ಗ್ರೂಪ್‌ನ ಉಪ ವ್ಯವಸ್ಥಾಪಕಿ ದಿಪಾ, ಸ್ಥಳಿಯರು ಮತ್ತಿತರರು ಹಾಜರಿದ್ದರು.