ಕೋಲ್ಕತ್ತಾ, ಡಿ . 19: 13 ನೇ ಆವೃತ್ತಿ ಐಪಿಎಲ್ ನ ಹರಾಜು ಖಾಸಗಿ ಹೋಟೆಲ್ ನಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಮುಗಿಬಿದ್ದಿದ್ದಾರೆ.
ಸ್ಫೋಟಕ ಆರಂಭಿಕ ಆಟಗಾರ ಕ್ರಿಸ್ ಲಿನ್ ಮುಂಬೈ ಇಂಡಿಯನ್ಸ್ ಪಾಲಾದರು. ಮಾರ್ಗನ್ ಗೆ 5.25 ಕೋಟಿ ನೀಡಿ ಶಾರುಖ್ ಒಡೆತನದ ತಂಡ ಖರೀದಿಸಿತು. ಜೇಸನ್ ರಾಯ್ 1ಕೋಟಿ 50 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು.
ವರ್ಷದ ಅತ್ಯುತ್ತಮ ಬೌಲರ್ ಗಳಲ್ಲಿ ಒಬ್ಬರಾದ ಪ್ಯಾಟ್ ಕಮಿನ್ಸ್ ಭಾರಿ ಬೆಲೆಗೆ ಮಾರಾಟವಾದರು. ಆಸೀಸ್ ಬೌಲರ್ ಗೆ ಆರ್ ಸಿ ಬಿ ಮತ್ತು ಡೆಲ್ಲಿ ತಂಡಗಳು ಭಾರಿ ಪೈಪೋಟಿ ನೀಡಿದವು .ನಂತರ ಕೊನೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಯಾಟ್ ಕಮಿನ್ಸ್ ರನ್ನು 15.5 ಕೋಟಿ ಕೊಟ್ಟು ಖರೀದಿಸಿತು.