ಲಂಡನ್, ಮೇ. 30, ನ್ಯೂಸ್ ಎಕ್ಸ್ ಪ್ರೆಸ್: ಲಂಡನ್ ನ ಡೇಲಿಯಲ್ ರಸ್ತೆಯಲ್ಲಿರುವ ಮರವೊಂದು ಹೂ ಬಿಟ್ಟಿದ್ದು, ಅದರ ಮೇಲೆ ‘ನನ್ನ ಹೂವುಗಳನ್ನು ಕೀಳಬೇಡಿ’ ಎಂದು ಚೀಟಿ ಬರೆದು ಅಂಟಿಸಿದ್ದರು.
ಸಾರ್ವಜನಿಕ ಸ್ಥಳದಲ್ಲಿರುವ ಮರವೊಂದರ ಹೂವುಗಳ ಮೇಲೆ ಅಧಿಕಾರ ಚಲಾಯಿಸಲು ಸ್ಥಳೀಯರೊಬ್ಬರು ಮೇಲಾಟ ನಡೆಸಿದ್ದಾರೆ. ‘ಸಾರ್ವಜನಿಕ ಸ್ಥಳದಲ್ಲಿನ ಹೂವುಗಳ ಮೇಲೂ ಜನ ಅಧಿಕಾರ ಚಲಾಯಿಸುತ್ತಾರಲ್ಲ.’ ಎಂಬುದಾಗಿ ಮತ್ತೊಬ್ಬರು ಚೀಟಿ ಅಂಟಿಸಿದ್ದರು. ಹೀಗೆ ಇನ್ನೂ ಎರಡು ಚೀಟಿಗಳು ಅಂಟಿಸಲ್ಪಟ್ಟಿದ್ದು ಹೂವಿನ ಮರವೂ ವಾಗ್ವಾದಕ್ಕೆ ವಸ್ತುವಾಗಿದೆ.