ಬೆಂಗಳೂರು: ನಮ್ಮ ಪೂರ್ವಜರು ಹಿಂದೆ ನೆಲದ ಮೇಲೆ ಮಲಗುತ್ತಿದ್ದರು.ಅಷ್ಟೇ ಯಾಕೆ ಇಂದು ಸಹ ಹಲವಾರು ಜನರು ನೆಲದ ಮೇಲೆ ಮಲಗುತ್ತಾರೆ. ಆದರೆ ಇದೀಗ ಆಧುನಿಕ ಜಗತ್ತಿನಲ್ಲಿ ವಿಧ ವಿಧವಾದ ಹಾಸಿಗೆಗಳು ಬಂದ ಮೇಲೆ ಅದರ ಮೇಲೆಯೇ ಮಲಗಿ, ನೆಲದ ಮೇಲೆ ಮಲಗಿದರೆ ಹೇಗಿರುತ್ತದೆ ಅನ್ನೋದೇ ಮರೆತು ಹೋಗಿದೆ. ಆದರೆ ಬೆಡ್ ಮೇಲೆ ಮಲಗುವುದಕ್ಕಿಂತ, ನೆಲದ ಮೇಲೆ ಮಲಗುವುದು ಉತ್ತಮ.
ಅನೇಕ ಜನರು ಹಾಸಿಗೆಯ ಮೇಲೆ ಮಲಗಲು ಬಯಸುತ್ತಾರೆ. ಆದರೆ ನೆಲದ ಮೇಲೆ ಮಲಗುವುದರಿಂದ ಅನೇಕ ಪ್ರಯೋಜನಗಳಿವೆ. ನೆಲದ ಮೇಲೆ ಮಲಗುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುತ್ತಾರೆ ತಜ್ಞರು. ಒಂದು ಕಾಲದಲ್ಲಿ ಎಲ್ಲಾ ಜನರು ನೆಲದ ಮೇಲೆ ಮಲಗುತ್ತಿದ್ದರು. ಆದರೆ ಕಾಲಕ್ಕೆ ತಕ್ಕಂತೆ ಈ ಪದ್ಧತಿಯೂ ಬದಲಾಗಿದೆ. ಅದೂ ಅಲ್ಲದೆ ವಿವಿಧ ಬಗೆಯ ಹಾಸಿಗೆಗಳೂ ಬರತೊಡಗಿದವು. ಆದರೆ ನೆಲದ ಮೇಲೆ ಮಲಗುವುದು ಉತ್ತಮ ಎನ್ನುತ್ತಾರೆ ತಜ್ಞರು.
ನೆಲದ ಮೇಲೆ ಮಲಗುವುದರಿಂದ ಬೆನ್ನುಮೂಳೆಯು ಉತ್ತಮ ಸ್ಥಿತಿಯಲ್ಲಿರುತ್ತದೆ. ಇದು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ನೆಲದ ಮೇಲೆ ಮಲಗುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ.
ನೆಲದ ಮೇಲೆ ಮಲಗುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದು ಯಾವುದೇ ತೊಡಕುಗಳು ಇಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಲು ಸಾಧ್ಯವಿದೆ. ಇದಲ್ಲದೆ, ಒತ್ತಡ, ದೈಹಿಕ- ಮಾನಸಿಕ ಅಸ್ವಸ್ಥತೆಯನ್ನು ತೊಡೆದುಹಾಕುತ್ತದೆ. ನೆಲದ ಮೇಲೆ ಮಲಗುವುದರಿಂದ ನಮ್ಮ ದೇಹದ ಉಷ್ಣತೆ ಕಡಿಮೆಯಾಗುತ್ತದೆ.