ಶಿಮ್ಲಾ, ಮೇ.13, ನ್ಯೂಸ್ ಎಕ್ಸ್ ಪ್ರೆಸ್: ಶಿಮ್ಲಾದಲ್ಲಿರುವ ಬ್ರಿಟಿಷ್ ಕಾಲದ, 100 ವರ್ಷ ಹಳೆಯ ಗ್ರಾಂಡ್ ಹೊಟೇಲ್ ನಲ್ಲಿ ನೆನ್ನೆ ರಾತ್ರಿ 12:30ರ ಸುಮಾರಿಗೆ ಹೊತ್ತಿಕೊಂಡ ಬೆಂಕಿಗೆ ಹೊಟೇಲ್ ಪ್ರಮುಖ ಭಾಗ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ನವೀಕರಣಗೊಳಿಸಲಾಗಿರುವ ಮಯೋ ಬ್ಲಾಕ್ ನ 3 ಮಹಡಿಗಳಲ್ಲಿ ಬೆಂಕಿ ಹತ್ತಿಕೊಂಡಿದೆ. ಹೆರಿಟೇಜ್ ಗ್ರಾಂಡ್ ಹೊಟೇಲ್ ನ ರಿಸೆಪ್ಶನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಇಂದು ಬೆಳಗ್ಗೆ 3ರ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಗಿದೆ.
ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಕಾನ್ ಸ್ಟೇಬಲ್ ಗಳು ಬೆಂಕಿ ಘಟನೆಯನ್ನು ಮೊದಲಿಗೆ ಗಮನಿಸಿದ್ದರು. ತಕ್ಷಣವೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ಕಟ್ಟಡದಲ್ಲಿ ಸಿಬ್ಬಂದಿಯಿರಲಿಲ್ಲ ಎಂದು ಶಿಮ್ಲಾ ಪೊಲೀಸ್ ಅಧೀಕ್ಷಕ ಒಮಾಪತಿ ಜಮ್ವಾಲ್ ಹೇಳಿದ್ದಾರೆ.