ತೊಕ್ಕೊಟ್ಟು, ಅ. 19: ಇಲ್ಲಿನ ಕಲ್ಲಾಪು ಪಟ್ಲದ ಹಾಸಿಗೆ ಗೋದಾಮಿಗೆ ಬೆಂಕಿ ತಗುಲಿ ಒಳಗಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಬೂದಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕುಟ್ ಕಾರಣ ಎನ್ನಲಾಗಿದ್ದು, ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.