ಬಿಗ್ ಬಾಸ್: ಬಿಗ್ ಬಾಸ್ ಪಟ್ಟ ಗೆಲ್ಲೋರು ಯಾರು?

ಬಿಗ್ ಬಾಸ್: ಬಿಗ್ ಬಾಸ್ ಪಟ್ಟ ಗೆಲ್ಲೋರು ಯಾರು?

ಬೆಂಗಳೂರು: ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಇನ್ನೇನು ಮುಗಿಯುವಂತೆ ತಲುಪಿದೆ ನೂರಕ್ಕೂ ಹೆಚ್ಚು ದಿನಗಳನ್ನು ಪೂರೈಸಿ. ಕೊನೆಗೆ ಬಿಗ್ ಬಾಸ್ ಫೈನಲ್ ಗೆ ಬಂದು ತಲುಪಿದೆ ಇಂದು ಮತ್ತು ನಾಳೆ ಫೈನಲ್ ನಡೆಯಲಿದೆ. ಈ ಬಾರಿಯ ಬಿಗ್ ಬಾಸ್ ಅತ್ಯಂತ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದೆ ಅದರಿಂದ ನೂರು ದಿನ ಇದ್ದ ಬಿಗ್ ಬಾಸ್ ಅನ್ನು ಎರಡು ವಾರ ಮುಂದಕ್ಕೆ ಹಾಕಲಾಗಿತ್ತು ಆದರೆ ಇಂದು ಬಿಗ್ ಬಾಸ್ ವಿನ್ನರ್ ಯಾರಾಗಲಿದ್ದಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ

ನೂರು ಕಂತುಗಳ ದಿನಗಳನ್ನು ಪೂರೈಸಿ ಕೊನೆಗೂ ಬಿಗ್ ಬಾಸ್ ಫಿನಾಲೆಗೆ ಬಂದು ತಲುಪಿದೆ. ಇಂದು ಸಂಜೆಯಿಂದ ಫಿನಾಲೆ ಸಂಚಿಕೆಯನ್ನು ಪ್ರಸಾರ ಮಾಡಲು ವಾಹಿನಿಯು ಸಿದ್ಧ ಮಾಡಿಕೊಂಡಿದೆ. ಸಂಜೆ 7.30ರಿಂದ ಫಿನಾಲೆ ಸಂಚಿಕೆಯನ್ನು ವೀಕ್ಷಿಸಬಹುದಾಗಿದೆ.

ಶೂಟಿಂಗ್ ನಲ್ಲಿ ನಡೆಯುವ ವಿಷಯಗಳು ಬಹಿರಂಗವಾಗ ಬಾರದು ಎನ್ನುವ ಕಾರಣಕ್ಕಾಗಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯಂತೆ. ಸಾಮಾನ್ಯ ಪ್ರೇಕ್ಷಕರಿಗೆ ಇಂದು ಪ್ರವೇಶವಿಲ್ಲ. ಅವರೇ ಆಯ್ಕೆ ಮಾಡಿರುವ ಕೆಲವೇ ಕೆಲವೇ ಪ್ರೇಕ್ಷಕರು ಇಂದು ಇರಲಿದ್ದಾರೆ.

ಈಗಾಗಲೇ ನಾಮಿನೇಟ್ ಆಗಿರುವ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ನಿನ್ನೆಯಿಂದಲೇ ಒಂದಷ್ಟು ಚಿತ್ರೀಕರಣದ ಕೆಲಸವನ್ನೂ ಮುಗಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಇವತ್ತು ಮತ್ತು ನಾಳೆ ಎರಡು ದಿನಗಳ ಕಾಲ ಫಿನಾಲೆ ಶೂಟಿಂಗ್ ನಡೆಯಲಿದೆ. ಜೊತೆಗೆ ಇವತ್ತು ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರಂತೆ.

ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ, ಕಾರ್ತಿಕ್, ತುಕಾಲಿ ಸಂತು, ವರ್ತೂರು ಸಂತು ಹಾಗೂ ವಿನಯ್ ಸದ್ಯ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಸಂಗೀತಾ, ವಿನಯ್ ಹಾಗೂ ಡ್ರೋನ್ ಪ್ರತಾಪ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಅಂತಿಮವಾಗಿ ಬಿಗ್ ಬಾಸ್ ಪಟ್ಟ ಯಾರ ಪಾಲಾಗಲಿದೆ ಎನ್ನುವುದು ನಾಳೆ ಗೊತ್ತಾಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos