ಬರಲಿವೆ ಸ್ಫೋಟಗೊಳ್ಳದ ಫೈಬರ್ ಸಿಲಿಂಡರ್ ಗಳು..!

ಬರಲಿವೆ ಸ್ಫೋಟಗೊಳ್ಳದ ಫೈಬರ್ ಸಿಲಿಂಡರ್ ಗಳು..!

ಮಾ.19, ನ್ಯೂಸ್ ಎಕ್ಸ್ ಪ್ರೆಸ್ : ಸಿಲಿಂಡರ್ ಸ್ಫೋಟದಿಂದ ಆದ ಅಪಘಾತಗಳ ಬಗ್ಗೆ ವರದಿಯನ್ನು ಓದುತ್ತಲೇ ಇರುತ್ತೇವೆ,  ಕಾರಣ ಸದ್ಯ ನಾವು ಬಳಸುತ್ತಿರುವ ಗ್ಯಾಸ್ ಸಿಲೆಂಡರ್ ಅಷ್ಟು ಸೇಫ್ ಅಲ್ಲ ಹಾಗೂ ಅಧಿಕ ತೂಕವನ್ನು ಸಹ ಹೊಂದಿರುವುದರಿಂದ ಮನೆಯಲ್ಲಿನ ಗೃಹಿಣಿಯರು ಇದನ್ನು ಸುಲಭವಾಗಿ  ಸ್ಥಳ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ ಆದರೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯುವಂತೆ ಬರುತ್ತಿದೆ ಹೊಸ ಸ್ಪೋಟ ಗೊಳ್ಳದ ಸಿಲೆಂಡರ್ ಗಳು. ಸಂಪೂರ್ಣ ಫೈಬರ್ ನಿಂದ ತಯಾರಾದ ಈ ಸಿಲೆಂಡರ್ ಗಳು ಸದ್ಯ ನೀವು ಬಳಸುತ್ತಿರುವ ನಟಿ ಗ್ಯಾಸ್ ಸಿಲಿಂಡರ್ ಗಳಿಗೆ ಹೋಲಿಕೆ ಮಾಡಿದ್ದಲ್ಲಿ ತುಂಬಾ ಸುರಕ್ಷಿತ ಹಾಗೂ ತೂಕ ಕಡಿಮೆ ಇರುವ ಈ ಸಿಲೆಂಡರ್ ಗಳು 2 5 10 ಕೆಜಿ ಗಳ ಫೈಬರ್ ನೆಟ್ ಅಡುಗೆ ಸಿಲಿಂಡರ್ ಗಳಾಗಿ ಬಿಡುಗಡೆಗೊಳ್ಳಲಿದೆ,  ಈ ರೀತಿಯ ಹೊಸ ವಿನ್ಯಾಸದ ಸಿಲಿಂಡರ್ಗಳನ್ನು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಗ್ರಾಹಕರಿಗೆ ನೀಡುತ್ತಿದ್ದು ಈ ಸಿಲಿಂಡರ್ ನಿಮಗೆ ಬೇಕಾದರೆ ನಿಮ್ಮ ಹಳೆಯ ಸಿಲೆಂಡರ್ ಅನ್ನು ವಾಪಸ್ ನೀಡಬೇಕು ಹಾಗೂ ಸಾವಿರ ರೂಪಾಯಿಗಳನ್ನು ಸಲ್ಲಿಸಬೇಕಾಗುತ್ತದೆ.

ಇಂದು ಈ ಸಿಲಿಂಡರ್ ಗಳ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ ಸದ್ಯ ನೀವು ಬಳಸುತ್ತಿರುವ ಸಿಲೆಂಡರ್ ಗಳು ತುಕ್ಕು ಹಿಡಿಯುತ್ತವೆ ಹಾಗೂ ಸಿಲಿಂಡರ್ ಇಟ್ಟ ಜಾಗದಲ್ಲಿ ಕಲೆಯನ್ನು ಮಾಡುತ್ತದೆ ಆದರೆ ಈ ಸಿಲಿಂಡರ್ಗಳು ಅಷ್ಟೇ ಅಲ್ಲದೆ ಈ ಸಿಲಿಂಡರ್ಗಳು ಯು ವಿ ಪ್ರೋಟೆಕ್ಟೆಡ್ ಹಾಗೂ ನೇಚರ್ ಫ್ರೆಂಡ್ಲಿ,  ಹಾಗೂ ಹಳೆಯ ಸಿಲೆಂಡರ್ ಗಳಲ್ಲಿ ಗ್ಯಾಸ್ ಎಷ್ಟು ಉಳಿದಿದೆ ಎಂದು ನೋಡಲು ಸಾಧ್ಯವಾಗುತ್ತಿರಲಿಲ್ಲ ಆದರೆ ಈ ಹೊಸ ವಿನ್ಯಾಸದ ಸೈಬರ್ ಸಿಲೆಂಡರ್ ಅಲ್ಲಿ ಆ ಸೌಲಭ್ಯವೂ ನೀಡಲಾಗಿದೆ, ಸ್ಪೋಟಗೊಳ್ಳುವ ಅಪಾಯವಿಲ್ಲ ಮೆಟಾಲಿಕ್ ಸಿಲಿಂಡರ್ ಗೆ ಹೋಲಿಕೆ ಮಾಡಿದರೆ ತೂಕ ಬಹಳಷ್ಟು ಕಡಿಮೆ ಇರಲಿದೆ.

ಫ್ರೆಶ್ ನ್ಯೂಸ್

Latest Posts

Featured Videos