ಶ್ರೀನಗರ್, ಅ. 15: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಮಗಳು, ಸಹೋದರಿ ಸೇರಿದಂತೆ ಹಲವು ಮಹಿಳಾ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿರುವ ಘಟನೆ ಇಂದು ನಡೆದಿದೆ.
ಫಾರೂಖ್ ಅಬ್ದುಲ್ಲಾ ಸಹೋದರಿ ಸುರಯ್ಯಾ ಅಬ್ದುಲ್ಲಾ ಹಾಗೂ ಮಗಳು ಸಾಫಿಯಾ ಅಬ್ದುಲ್ಲಾ ಖಾನ್ ಜಮ್ಮು-ಕಾಶ್ಮೀರದ ಮಾಜಿ ಚೀಫ್ ಜಸ್ಟೀಸ್ ಬಶೀರ್ ಅಹ್ಮದ್ ಖಾನ್ ಪತ್ನಿ ಹಾವಾ ಬಶೀರ್ ಸೇರಿದಂತೆ ಹಲವು ಪ್ರಮುಖ ಮಹಿಳಾ ಪ್ರತಿಭಟನಾಕಾರರನ್ನು ಬಂಧಿಸಿರುವುದಾಗಿ ತಿಳಿಸಿದೆ.
ಆಗಸ್ಟ್ 5ರಂದು ನಮ್ಮನ್ನು ಗೃಹಬಂಧನದಲ್ಲಿ ಇರಿಸಿ, 370ನೇ ವಿಧಿಯನ್ನು ರದ್ದುಗೊಳಿಸಲಾಗಿದೆ. ಇದೊಂದು ಬಲಾತ್ಕಾರದ ಮದುವೆ ಹೀಗಾಗಿ ಇದು ಕಾರ್ಯಗತವಾಗುವುದಿಲ್ಲ ಎಂದು ಸುರಯ್ಯಾ ಅಬ್ದುಲ್ಲಾ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.