ಮಾಗಡಿ, ನ. 6 : ಚಿರತೆ ದಾಳಿಗೆ ರೈತನೊಬ್ಬ ಬಲಿಯಾಗಿರುವ ಘಟನೆ ಶಿವಗಂಗೆಯ ಬೆಟ್ಟದ ತಪ್ಪಲಿನ ಬೆಟ್ಟಹಳ್ಳಿ ಕಾಲೋನಿಯಲ್ಲಿ ನಡೆದಿದೆ. ಕೆಂಪಯ್ಯ(55) ಬಲಿಯಾದ ರೈತ. ತೋಟದ ಕಡೆ ತೆರಳಿದ್ದ ಹಿನ್ನಲೆ ಕೆಂಪಯ್ಯ ಸಂಜೆಯಾದರೂ ಮನೆಗೆ ಮರಳಿಲ್ಲ. ಗಾಬರಿಗೊಂಡ ಮನೆಯವರು ಗ್ರಾಮದ ಸುತ್ತಮುತ್ತ ಹುಡುಕಾಟ ನಡೆಸಿ ತೋಟದ ಬದುವಿನಲ್ಲಿ ಕೆಂಪಯ್ಯ ಅವರ ಮೃತದೇಹ ಪತ್ತೆಯಾಗಿದೆ. ಚಿರತೆ ದಾಳಿ ಮಾಡಿ ಸಂಪೂರ್ಣವಾಗಿ ತಿಂದು ಹಾಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕುದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.