ಕೊಪ್ಪಳ, ಮೇ.13, ನ್ಯೂಸ್ ಎಕ್ಸ್ ಪ್ರೆಸ್: ಜನರಿಗೆ ನಕಲಿ ಬಂಗಾರ ಕೊಟ್ಟು ಮೋಸ ಮಾಡುತ್ತಿದ್ದ ಆರೋಪಿಯನ್ನು ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ. ಓಬ್ಬ ಆರೋಪಿ ಅರೆಸ್ಟ್ ಆಗಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಕೂಡ್ಲಿಗಿ ಮೂಲದ ಬಸವರಾಜ್ ಕೊರಚರ ಸಿಕ್ಕಿಬಿದ್ದ ಆರೋಪಿ.
ಮೊಬೈಲ್ ಮೂಲಕ ಕರೆ ಮಾಡಿ ನಮಗೆ ನಿಧಿ ಸಿಕ್ಕಿದೆ ಅಂತಾ ಹೇಳಿ ಮೋಸ ಮಾಡುತ್ತಿದ್ದರು. ಒಂದು ಗ್ರಾಮ್ ನಷ್ಟು ಅಸಲಿ ಬಂಗಾರ ತೋರಿಸಿ ಜನರನ್ನು ಯಾಮಾರಿಸುತ್ತಿದ್ದರು. ಬಳಿಕ ನಕಲಿ ಗಟ್ಟಿ ಬಂಗಾರ ನೀಡಿ ವಂಚಿಸುತ್ತಿದ್ದರು.
ಆಂಧ್ರ ಮೂಲದ ವ್ಯಕ್ತಿಗೆ ನಕಲಿ ಬಂಗಾರ ನೀಡುವಾಗ ಪಿಎಸ್ಐ ವಿಶ್ವನಾಥ ಹಿರೇಗೌಡರ ನೇತ್ವತ್ವದ ಪೋಲಿಸರ ತಂಡ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.