ಬೆಂಗಳೂರು, ಅ. 9: ಗುಲಾಬಿ ಕೇವಲ ಹೆಣ್ಣುಮಕ್ಕಳ ಮುಡಿಗೇರಿ ಅವರ ಖುಷಿ ಹೆಚ್ಚು ಮಾಡಲು ಮಾತ್ರವಲ್ಲದೆ ಅದರಿಂದ ತಯಾರಾದ ಅನೇಕ ಬಗೆಯ ವಸ್ತುಗಳು ಮನುಷ್ಯರ ಉಪಯೋಗಕ್ಕೆ ಟೊಂಕ ಕಟ್ಟಿ ನಿಂತಿರುತ್ತವೆ.
ರೋಸ್ ವಾಟರ್ ನೈಸರ್ಗಿಕ ಕ್ಲೆನ್ಸರ್ ಇದ್ದಂತೆ, ಚರ್ಮವನ್ನು ಸ್ವಚ್ಛಗೊಳಿಸೋದು ಮಾತ್ರವಲ್ಲ, ಕಾಂತಿಯುಕ್ತವಾಗಿ ಮಾಡುತ್ತದೆ. ರೋಸ್ ವಾಟರ್ ಬೌಲನ್ನು ಮೊದಲು ಫ್ರಿಡ್ಜ್ ನಲ್ಲಿಡಿ. ಯಾಕಂದ್ರೆ ತಣ್ಣಗಿದ್ದಷ್ಟು ತಾಜಾತನದಿಂದ ಕೂಡಿರುತ್ತದೆ, ಚರ್ಮವನ್ನು ಬಹುಬೇಗ ತೇವಯುಕ್ತಗೊಳಿಸುತ್ತದೆ.
1 ಹತ್ತಿಯ ಸಹಾಯದಿಂದ ರೋಸ್ ವಾಟರ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಧೂಳನ್ನೆಲ್ಲ ಸ್ವಚ್ಛಗೊಳಿಸಿ. ನಂತರ ಮತ್ತೆ ಕಾಟನ್ ಸಹಾಯದಿಂದ ಮುಖಕ್ಕೆ ರೋಸ್ ವಾಟರ್ ಹಚ್ಚಿ ಹಾಗೆಯೇ ಆರಲು ಬಿಡಿ.
2 ಕೆನ್ನೆಗೆ ರೋಸ್ ವಾಟರ್ ಹಚ್ಚುವಾಗ ನಿಮ್ಮ ಕೈಗಳ ಮೂವ್ಮೆಂಟ್ ಮೇಲ್ಮುಖವಾಗಿ ಮತ್ತು ಹೊರಮುಖವಾಗಿರಲಿ. ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಅತ್ಯಂತ ಜೋರಾಗಿ ಒತ್ತಿ ರೋಸ್ ವಾಟರ್ ಹಚ್ಚಬೇಡಿ.
3 ಹಣೆಯ ಮಧ್ಯದಿಂದ ರೋಸ್ ವಾಟರ್ ಹಚ್ಚಲು ಆರಂಭಿಸಿ. ನಂತರ ಹಣೆಯ ಎರಡೂ ಭಾಗಗಳಿಗೆ ಹಚ್ಚಿ.
4 ಹತ್ತಿಗೆ ರೋಸ್ ವಾಟರ್ ಹಾಕಿಕೊಂಡು ಗಲ್ಲದ ಬಳಿ ವೃತ್ತಾಕಾರವಾಗಿ ಹಚ್ಚಿಕೊಳ್ಳುವುದು ಉತ್ತಮ.
ಇವಿಷ್ಟು ಆದ ಬಳಿಕ ಹತ್ತಿಯನ್ನು
ರೋಸ್ ವಾಟರ್ ನಿಂದ ಒದ್ದೆಮಾಡಿಕೊಂಡು ಮುಖದ ಮೇಲೆಲ್ಲಾ ತಟ್ಟಿಕೊಳ್ಳಿ, ನಂತರ ಅದನ್ನು ಒಣಗಲು ಬಿಡಿ. ಡ್ರೈಸ್ಕಿನ್ ಹಾಗೂ ಮೊಡವೆ ಸಮಸ್ಯೆಯಿರುವವರು ರೋಸ್ ವಾಟರ್ ಬಳಸುವುದು ಉತ್ತಮ.