ಪೀಣ್ಯ ದಾಸರಹಳ್ಳಿ, ಸೆ. 25: ಬೆಂಗಳೂರಿನ ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಹಾಗೂ ನಾರಾಯಣ್ ನೇತ್ರಾಲಯ ಸಂಸ್ಥೆಯ ಸಹಯೋಗದೊಂದಿಗೆ ಒಂದು ದಿನದ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜಿಸಿದ್ದು, ರೆ.ಫಾದರ್ ಡಾ ಸಾಬುಜಾರ್ಜ್ ಚಾಲನೆ ನೀಡಿದರು.
ನಾರಾಯಣ ನೇತ್ರಾಲಯ ಸಂಸ್ಥೆಯ ಮ್ಯಾನೇಜರ್ ಶೀಬಲ್ ಬೆನೋ, ವೈದ್ಯರಾದ ಡಾ. ಹಾರ್ದಿಕ್, ವಿಜಯ, ಅನುಪ, ಕುಸುಮ ಹಾಗೂ ಎನ್.ಮಾದೇಶ್ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾದಿಕಾರಿಗಳಾದ ಕುಮಾರಿ, ರುದ್ರೇಶ್, ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 200 ಜನರು ಮತ್ತು ವಿದ್ಯಾರ್ಥಿಗಳು ತಪಾಸಣೆ ಕೊಳ್ಳುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.