ನೂತನ ವೃತ್ತ ನಿರೀಕ್ಷಕರಾಗಿ ಕೆ.ಪ್ರಭಾಕರ್

ನೂತನ ವೃತ್ತ ನಿರೀಕ್ಷಕರಾಗಿ ಕೆ.ಪ್ರಭಾಕರ್

ಮಂಡ್ಯ : ಪಾಂಡವಪುರ ನೂತನ ವೃತ್ತ ನಿರೀಕ್ಷಕರಾಗಿ ಕೆ. ಪ್ರಭಾಕರ್ ಈ ಹಿಂದೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ವೃತ್ತ  ನಿರೀಕ್ಷಕರಾಗಿ  ಕಾರ್ಯ ನಿರ್ವಹಿಸುತ್ತಿದ್ದ ಸಿ. ಎಂ. ರವೀಂದ್ರ ಅವರನ್ನು ಕರ್ನಾಟಕ ಸರಕಾರ ಲೋಕಾಯುಕ್ತ ವಿಭಾಗಕ್ಕೆ ವರ್ಗಾವಣೆ ಮಾಡಿದ್ದರಿಂದ ತೆರವಾದ ಇವರ ಸ್ಥಾನಕ್ಕೆ ಪಾಂಡವಪುರ  ಪೊಲೀಸ್ ಠಾಣೆಯ ನೂತನ ವೃತ್ತ ನಿರೀಕ್ಷಕರಾಗಿ ಕೆ. ಪ್ರಭಾಕರ್ ರವರನ್ನು ಕರ್ನಾಟಕ ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದ ಕೆ. ಪ್ರಭಾಕರ್ ಅವರನ್ನು ಕರ್ನಾಟಕ ಸರಕಾರ ವರ್ಗಾವಣೆ ಮಾಡಿದ್ದೂ ಶುಕ್ರವಾರ ಸಂಜೆ ಕೆ ಪ್ರಭಾಕರ್ ಅಧಿಕಾರ ಸ್ವೀಕರಿಸಿದರು

ಈ ಹಿಂದೆಯೇ ದಕ್ಷ ಪ್ರಾಮಾಣಿಕ ಅಧಿಕಾರಿಯಾಗಿ ಸಾರ್ವಜನಿಕರ ಕುಂದು ಕೊರತೆ ತ್ವರಿತವಾಗಿ ನೀಗಿಸುವಲ್ಲಿ ಶ್ರಮವಹಿಸಿ  ಮಾನವೀಯಮೌಲ್ಯ ವುಳ್ಳ ಹೃದಯಸ್ಪರ್ಶಿ ವ್ಯಕ್ತಿಯಾಗಿ   ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದು ಹಾಗೂ ಮಂಡ್ಯ ಸಿಟಿ ಪೂರ್ವ ಪೊಲೀಸ್ ಠಾಣೆಯಲ್ಲಿ ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆಸಲ್ಲಿಸುತ್ತಿರುವಾಗಲೇ ಮುಂಬಡ್ತಿ ಪಡೆದ  ಕೆ ಪ್ರಭಾಕರ್ ಮದ್ದೂರು ವೃತ್ತ ನಿರೀಕ್ಷಕರಾಗಿ ಕಾರ್ಯ ನಿರ್ವಯಿಸಿ ನಂತರ ಚನ್ನಪಟ್ಟಣ ತರಬೇತಿ ಶಾಲೆಗೆ ವರ್ಗಾವಣೆಗೊಂಡಿದ್ದರು  ಈಗ ಮತ್ತೆ ಮಂಡ್ಯ ಜಿಲ್ಲೆಯ ಪಾಂಡವಪುರ ವೃತ್ತ ನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos