ಬೆಂಗಳೂರು, ಆ. 25 : 2019ರ ಗಣೇಶೋತ್ಸವಕ್ಕೆ ಇನ್ನು ಒಂದೇ ವಾರ ಮಾತ್ರ ಬಾಕಿ. ಈಗಾಗಲೇ ತರಾವರಿ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿವೆ. ಇಂತಹ ಗಣೇಶ ಮೂರ್ತಿಗಳು ಪಿಒಪಿಯಿಂದ ಮಾಡಿದ್ದಾದರೇ ಖರೀದಿಸುವ ಮುನ್ನಾ ಜಾಗೃತರಾಗಿರಿ.
ಗಣೇಣನ ಹಬ್ಬಕ್ಕೆ ಕೆಲವೇ ವಾರಗಳು ಬಾಕಿ. ಪರಿಸರ ಸ್ನೇಹಿ ಗಣಪನಿಗೆ ಉತ್ತೇಜನ ನೀಡಿರುವ ರಾಜ್ಯ ಸರ್ಕಾರ, ಪಿಒಪಿ ಮೂರ್ತಿಯ ವಿಸರ್ಜನಗೆ ಕೋಕ್ ನೀಡಿದೆ. ಪಿಒಪಿ ಗಣಪತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಲು ಅವಕಾಶ ನೀಡದಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಎಲ್ಲಾ ಸ್ಥಳೀಯ ಸಂಸ್ಥೆಗಳ ಯೋಜನಾ ನಿರ್ದೇಶಕರಿಗೆ ಕಟ್ಟು ನಿಟ್ಟಾಗಿ ಪಾಲಿಸುವಂತೆ ಆದೇಶದಲ್ಲಿ ಸೂಚಿಸಿದೆ.