ಪಾವಗಡದ: ಪತ್ರಿಕಾ ವರದಿಗಾರರು ಹಾಗೂ ಪತ್ರಿಕಾ ವಿತರಣಾಕಾರರಿಗೆ ಶಕ್ತಿವರ್ಧಕ ಔಷಧಿಗಳು ಹಾಗೂ ಪಾನೀಯಗಳನ್ನು ವಿತರಿಸಲಾಗುತ್ತಿದೆ ಎಂದು ಜಪಾನಂದ ಸ್ವಾಮಿಜಿ ತಿಳಿಸಿದರು.
ಇದಕ್ಕೆ ಮೂಲ ಕಾರಣ ಪತ್ರಕರ್ತರು ಅಹರ್ನಿಷಿ ತಮ್ಮ ಕಾರ್ಯನಿಮಿತ್ತ ಜನಸಾಮಾನ್ಯರೊಡನೆ ಬೆರೆತು ಓಡಾಡುತ್ತಿರುವುದನ್ನು ಕಂಡ ಸ್ವಾಮಿ ಜಪಾನಂದಜೀ ರವರು ಪತ್ರಕರ್ತರ ಆರೋಗ್ಯ ಬಹುಮುಖ್ಯವಾದದ್ದು ಎಂಬುದನ್ನು ಕಂಡು ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ವಿಟಮಿನ್ ‘ಸಿ’ ಮತ್ತು ಜಿಂಕ್ ಉಳ್ಳ ಮಾತ್ರೆಗಳನ್ನು ನೀಡುತ್ತಿರುವುದಲ್ಲದೆ , ಶಕ್ತಿವರ್ಧಕ ಪಾನೀಯಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.
ಕಳೆದ ಮೂರು ದಿನಗಳಿಂದ ಪತ್ರಕರ್ತರು ತಮ್ಮ ತಮ್ಮ ಕಾರ್ಯವನ್ನು ನಿರ್ವಹಿಸಿದ ನಂತರ ಆಶ್ರಮಕ್ಕೆ ಬಂದು ತಂಡೋಪ ತಂಡವಾಗಿ ಇವುಗಳನ್ನು ಸ್ವೀಕರಿಸಿದರು. ಪೂಜ್ಯ ಸ್ವಾಮೀಜಿಯವರು ಯಾವಾಗಲೂ ಮಾಧ್ಯಮದವರಿಗೆ ವಿಶೇಷವಾಗಿ ಸಹಾಯಹಸ್ತವನ್ನು ಆಗಿಂದಾಗ್ಗೆ ನೀಡುತ್ತಾ ಬರುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸಿಬ್ಬಂದಿ ವರ್ಗದವರಾದ ಪ್ರಕಾಶ್ ನಾಯಕ, ಅನಿಲ್ ನಾಯಕ, ಉಪಸ್ಥಿತರಿದ್ದರು