ಮಹದೇವಪುರ: ಅಭಿವೃದ್ಧಿ ಪೂರಕ ಕಾರ್ಯಗಳನ್ನು ಸರ್ಮಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಅರವಿಂದ ಲಿಂಬಾವಲಿ ಅವರು ಸೂಚಿಸಿದರು.
ಮಹದೇವಪುರ ಕ್ಷೇತ್ರದ ಬೆಳ್ಳಂದೂರು ಹಾಗೂ ವರ್ತೂರು ವಾರ್ಡ್ನಲ್ಲಿ ಅಭಿವೃದ್ಧಿ ಕಾಮಾಗಾರಿಗಳ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು ಅಭಿವೃದ್ಧಿ ಕಾಮಾಗಾರಿಗಳನ್ನು ಸರ್ಮಪಕವಾಗಿ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು.
ರಸ್ತೆ ,ಕುಡಿಯುವ ನೀರು,ಒಳಚರಂಡಿ ಕಾಮಾಗಾರಿಗಳು ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ದೂರ ಮಾಡಬೇಕೆಂದು ಹೇಳಿದರು.
ಕಾಮಾಗಾರಿಗಳ ಗುಣಮಟ್ಟದಿಂದ ಮಾಡುವಂತೆ ಸೂಚಿಸಿದ ಶಾಸಕರು ಕಳಪೆ ಕಾಮಾಗಾರಿ ಕಂಡುಬಂದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಬೆಳ್ಳಂದೂರು ಹಾಗೂ ವರ್ತೂರು ಭಾಗಗಳಲ್ಲಿ ಅಭಿವೃದ್ಧಿ ಕಾಮಾಗಾರಿ ಗಳನ್ನು ಪರಿಶಿಪರಿಶೀಲನೆ ನಡೆಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಪುಷ್ಪ ಮಂಜುನಾಥ್, ಆಶಾಸುರೇಶ್, ರಾಜ್ಯಕಾರ್ಯಕಾರಿಣಿ ಸದಸ್ಯರಾದ ಜಯಚಂದ್ರರೆಡ್ಡಿ, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮನೋಹರ ರೆಡ್ಡಿ, ಮುಖಂಡರಾದ
ರಾಜಾರೆಡ್ಡಿ, ಮಹೇಂದ್ರ ಮೋದಿ, ನಾಗೇಶ್ ರೆಡ್ಡಿ, ರಾಜೇಶ್, ಪವನ್ ಕುಮಾರ್ ಹಾಗೂ ಅಧಿಕಾರಿಗಳಾದ ಮುನಿರೆಡ್ಡಿ, ರಮೇಶ್ ಇದ್ದರು.