ಪಾವಗಡ. ಡಿ. 28: ಅಯ್ಯಪ್ಪ ಸ್ವಾಮಿಯ ಮಾಲಾದಾರಿಗಳು ವ್ರತಾಚರಣೆ ಮುಗಿದ ನಂತರವು ಸಹ ತಮ್ಮ ದೈನಂದಿನ ಜೀವನದಲ್ಲಿ ಶಿಸ್ತು, ಸಮಯಪಾಲನೆ ಮತ್ತು ಅದ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕೆಂದು ಚಿತ್ರದುರ್ಗ ಸಂಸದ ಎನ್. ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ತುಮಕೂರು ರಸ್ತೆಯ ಮಾರ್ಗದಲ್ಲಿರುವ ಅಯ್ಯಪ್ಪಗಿರಿ ಬೆಟ್ಟದ ತಪ್ಪಲಿನಲ್ಲಿರುವ ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮಂಡಲಪೂಜೆಯಲ್ಲಿ ಭಾಗವಹಿಸಿ ಪಡಿಪೂಜೆಯ ಜ್ಯೋತಿಯನ್ನು ಬೆಳಗಿಸಿ ಮಾತನಾಡಿದರು.
ಈ ವೇಳೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ನ ನಿದೇರ್ಶಕರಾದ ರಾಮಾಂಜಿನರೆಡ್ಡಿ ಮಾತನಾಡಿ, ಅಯ್ಯಪ್ಪಗಿರಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷ ಸುಮಾರು 5೦೦ ಮಾಲಾದಾರಿಗಳು ವ್ರತಾಚರಣೆ ಮಾಡುತ್ತಾರೆ, ನವಂಬರ್ ನಿಂದ ಜನವರಿ ತಿಂಗಳವರೆಗೂ ಈ ದೇವಸ್ಥಾನದಲ್ಲಿ ಪೂಜೆಯನ್ನು ನೇರವೇರಿಸಲಿದ್ದು, ನಿತ್ಯ ದಾಸೋಹ ನಡೆಯುತ್ತೆ. ಆದರೆ ,ಮಾಲಾದಾರಿಗಳು ಅಡುಗೆ ತಯಾರಿಸಲು, ಸ್ನಾನ ಮತ್ತು ಶೌಚಾಲಯ ಇಲ್ಲದೇ ಮಾಲಾದಾರಿಗಳಿಗೆ ತೊಂದರೆಯುಂಟಾಗುತ್ತಿದ್ದು, ಆದ್ದರಿಂದ ತಮ್ಮ ಅನುದಾನದಲ್ಲಿ ಸಮುಧಾಯಭವನ ನಿರ್ಮಾಣಕ್ಕೆ ಅನುದಾನ ನೀಡಬೆಕೇಂದು ಮನವಿ ಸಲ್ಲಿಸಿದರು.