ಮಳವಳ್ಳಿ, ಡಿ. 17 : ವಿದ್ಯುತ್ ಸ್ವರ್ಶದಿಂದ ಒಂದು ವಾರದ ಅಂತರದಲ್ಲೇ ಮತ್ತೊಂದು ಕಾಡಾನೆಬಲಿಯಾಗಿರುವ ಘಟನೆ ತಾಲ್ಲೂಕಿ ಹಲಗೂರು ಹೋಬಳಿಯ ಎಚ್ ಬಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲಗೂರು ವನ್ಯ ಜೀವಿ ವಲಯ ತಾಳುಬೆಟ್ಟದ ಬಳಿ ನಡೆದಿದೆ. ತಾಲ್ಲೂಕಿನ ಎಚ್ ಬಸಾಪುರ ವಾಸಿ ಶಿವಲಿಂಗಯ್ಯ ಪುತ್ರ ಕಿರಣ್ ತಮ್ಮ ಜಮೀನುಗಳಿಗೆ ಕಾಡು ಪ್ರಾಣಿಗಳು ಬರದಂತೆ ತಡೆಯಲು ಜಮೀನು ಸುತ್ತಾ ಕಂಬಗಳನ್ನು ನೆಟ್ಟು ಅದರಲ್ಲಿ ವಿದ್ಯುತ್ ಸಂಪರ್ಕ ನೀಡಿದ್ದರು, ಬಸವನ ಬೆಟ್ಟದೆ ಕಾಡಿನಿಂದ ಆಹಾರ ಅರಸಿಕೊಂಡು ಬಂದ ಕಾಡಾನೆ ವಿದ್ಯುತ್ ಸ್ವರ್ಶವಾಗಿ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.