ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ!

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ!

ಬೆಂಗಳೂರು: ರಾಜ್ಯದ ಜನರು ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ದಿನನಿತ್ಯ ಉಪಯೋಗಿಸುವ ದವಸ ಧಾನ್ಯ, ಪೆಟ್ರೋಲ್, ಡೀಸೆಲ್, ಗ್ಯಾಸ್, ಇದರ ನಡುವೆ ರಾಜ್ಯದ ಜನತೆಗೆ ಮತ್ತೊಂದು ಕರೆಂಟ್ ಶಾಕ್ ಕಾದಿದೆ. ಕಳೆದ ವರ್ಷ ಮೂರು ಬಾರಿ ವಿದ್ಯುತ್‌ ದರ ಏರಿಕೆ ಮಾಡಿದ ಎಸ್ಕಾಂ. ಈ ಬಾರಿ ವಿದ್ಯುತ್ ಪರಿಷ್ಕರಣೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಸಂಬಂಧ ಬೆಸ್ಕಾಂ ಸೇರಿ ಇತರೆ ಕಂಪನಿಗಳು ವಿದ್ಯುತ್ ದರ ಏರಿಸುವಂತೆ, ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆ ಗಳಿಗೆ ಆಗುವ ವೆಚ್ಚ ಸರಿದೂಗಿಸಲು ಬೆಲೆ ಏರಿಕೆ ಮಾಡೋಕೆ ಹೊರಟಿದೆ. ಆದ್ದರಿಂದ ವಿದ್ಯುತ್‌ ದರ  ಏರಿಕೆ ಅನಿವಾರ್ಯವಾಗಿದೆ. ಆದ್ದರಿಂದ ಕಳೆದ ವರ್ಷ ಮೂರು ಬಾರಿ ವಿದ್ಯುತ್‌ ದರ  ಪರಿಷ್ಕರಣೆ  ಮಾಡಿದ್ದ, ಕೆಇಆರ್‌ಸಿ ಈಗ ಮತ್ತೆ ವಿದ್ಯುತ್ ತರ ಏರಿಕೆ ಮಾಡಲು ಸಿದ್ಧತೆ ನಡೆಸಿದೆ. ಜನವರಿ ತಿಂಗಳಲ್ಲಿಗೆ ಪ್ರತಿ ಯೂನಿಟ್ ಗೆ ಇಂತಿಷ್ಟು ವಿದ್ಯುತ್‌ ದರ ಹೆಚ್ಚಳ ಮಾಡಿ ಎಂದು ಎಸ್ಕಾಂಗಳು ಪ್ರಸ್ತಾವನೆ ಇಡಲಾಗಿದೆ ಎಂದು ಮಾಹಿತಿ ಹೊರ ಬೀಳುತ್ತಿದೆ. ಬೆಸ್ಕಾಂ ಪ್ರತಿ ಯುನಿಟ್‌ ಗೆ 40 ರಿಂದ 50 ಪೈಸೆ ಹೆಚ್ಚಿಸಲು ನಿರ್ಧರಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos