ಎದ್ದು ನಿಂತ 15 ಅಡಿ ಹೆಬ್ಬಾವು

ಎದ್ದು ನಿಂತ 15 ಅಡಿ ಹೆಬ್ಬಾವು

ರಾಮನಗರ, ಆ. 25 : ರಸ್ತೆಯ ಪಕ್ಕದಲ್ಲಿ ಮಲಗಿದ 15 ಅಡಿ ಉದ್ದದ ಹೆಬ್ಬಾವು ಬೈಕ್ ಮೇಲೆ ಎದ್ದು ನಿಂತಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಆಹಾರ ಅರಸಿ ಬಂದ ಹೆಬ್ಬಾವು ರಾತ್ರಿ ರಸ್ತೆ ಪಕ್ಕದಲ್ಲಿ ಮಲಗಿದೆ. ನೋಡಿದ ಸ್ಥಳೀಯರು ಮೊಬೈಲ್ ಫೋನ್ ನಲ್ಲಿ ವಿಡಿಯೋ ಮಾಡುತ್ತಾ ಕಿರುಚಾಡಿದ್ದಾರೆ. ಹೆಬ್ಬಾವು ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಹತ್ತಿದೆ. ಜನ ಗಾಬರಿಗೊಂಡು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹೆಬ್ಬಾವನ್ನು ಸೆರೆ ಹಿಡಿದು ಬನ್ನೇರುಘಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos